ETV Bharat / sitara

ನಟ ಸುಶಾಂತ್​ರದ್ದು ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಹಿರಂಗ - ಬಾಲಿವುಡ್ ಸುದ್ದಿ

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್​ ರಜಪೂತ್ ಅತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. ನಿನ್ನೆ ಸುಶಾಂತ್​ ಅವರ ಮಾವ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.

Actor Sushant Singh Rajput death
ಸುಶಾಂತ್​ ಆತ್ಮಹತ್ಯೆ
author img

By

Published : Jun 15, 2020, 10:41 AM IST

ಮುಂಬೈ(ಮಹಾರಾಷ್ಟ್ರ): ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಊಹಾಪೋಹಾಗಳಿಗೆ ತೆರೆಬಿದ್ದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸುಶಾಂತ್​ರದ್ದು ಅತ್ಮಹತ್ಯೆ ಎನ್ನುವುದು ಖಚಿತವಾಗಿದೆ.

ಮುಂಬೈನ ಡಾ. ಆರ್​.ಎನ್​​ .ಕೂಪರ್​ ಮುನಿಸಿಪಲ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಇಂದು ಅಂತ್ಯ ಸಂಸ್ಕಾರವನ್ನು ಮುಂಬೈನ ವಿಲೆ ಪಾರ್ಲೆಯಲ್ಲಿ ನಡೆಸಲಾಗುತ್ತದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಸದ್ಯಕ್ಕೆ ಬಿಹಾರದಲ್ಲಿ ನೆಲೆಸಿರುವ ಸುಶಾಂತ್ ತಂದೆ ಹಾಗೂ ಕುಟುಂಬದ ಇತರ ಸದಸ್ಯರು ಮುಂಬೈಗೆ ತೆರಳಲು ಪಾಟ್ನಾ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಇದರ ಜೊತೆಗೆ ಸುಶಾಂತ್​ ಕುಟುಂಬದ ಸಂಬಂಧಿಯಾಗಿರುವ ಬಿಹಾರದ ಮೊಕಾಮಾ ಕ್ಷೇತ್ರದ ಬಿಜೆಪಿ ಶಾಸಕ ನೀರಜ್​ ಕುಮಾರ್​ ಸಿಂಗ್​ ಬಬ್ಲೂ ಕೂಡಾ ಮುಂಬೈಗೆ ತೆರಳುತ್ತಿದ್ದಾರೆ.

ಸುಶಾಂತ್​ ಅವರ ಮಾವ ಆರ್​ ಸಿ ಸಿಂಗ್​ ಅವರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ಅಲ್ಲದೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್​ ಶಾ ಅವರಿಗೆ ಒತ್ತಾಯಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.