ಸಾಮಾನ್ಯವಾಗಿ ಆಸ್ಕರ್ ಎಂದು ಕರೆಯಲ್ಪಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಸಂಸ್ಥೆ ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿರುವ 276 ಚಲನಚಿತ್ರಗಳ ಪಟ್ಟಿ ಬಹಿರಂಗಪಡಿಸಿದೆ.
ಆ ಪಟ್ಟಿಯಲ್ಲಿ, ತಮಿಳು ನಟ ನಟ ಸೂರ್ಯ ಅಭಿನಯದ 'ಜೈ ಭೀಮ್' ಚಿತ್ರ ಸ್ಥಾನ ಪಡೆದುಕೊಂಡಿದೆ. ಕೆಲವು ದಿನಗಳಲ್ಲಿ ಜೈ ಭೀಮ್ ಚಿತ್ರದ ದೃಶ್ಯವನ್ನು ಆಸ್ಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ತೋರಿಸಲಾಗಿತ್ತು.
ಜೈ ಭೀಮ್ ಚಿತ್ರವು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗುವ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ನ್ಯಾಯ ಒದಗಿಸಲು ಚಂದ್ರು ಎಂಬ ವಕೀಲ ನಡೆಸಿದ ಅವಿರತ ಪ್ರಯತ್ನಗಳ ನೈಜ ಘಟನೆ ಆಧರಿಸಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಆಸ್ಕರ್ ಪ್ರಶಸ್ತಿಗಾಗಿ ಚಿತ್ರಗಳಿಗೆ ಮತದಾನವು ಜನವರಿ 27ರಿಂದ ಪ್ರಾರಂಭವಾಗಲಿದ್ದು, ಫೆಬ್ರವರಿ 1ರಂದು ಮುಕ್ತಾಯಗೊಳ್ಳಲಿದೆ. ಅಂತಿಮ ಪಟ್ಟಿಯನ್ನು ಫೆಬ್ರವರಿ 8ರಂದು ಬಹಿರಂಗಪಡಿಸಲಾಗುತ್ತದೆ.
ಇದನ್ನೂ ಓದಿ: ಜೈಭೀಮ್ ಚಿತ್ರತಂಡಕ್ಕೆ ಮತ್ತು ಉದಯನಿಧಿ ಸ್ಟಾಲಿನ್ಗೆ ಗ್ಲೋಬಲ್ ಆಸ್ಕರ್ ಪ್ರಶಸ್ತಿ