ಅಕ್ಟೋಬರ್ 13ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ಬಾಸ್-7 ರಿಯಾಲಿಟಿ ಶೋ ಆರಂಭಗೊಳ್ಳಲಿದ್ದು, ಈ ಸಲದ ಸೀಸನ್ನಲ್ಲಿ ಒಟ್ಟು 17 ಸ್ಪರ್ಧಿಗಳು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಬಾರಿಯ ಬಿಗ್ಬಾಸ್ ವಿಭಿನ್ನವಾಗಿ ಮೂಡಿ ಬರಲಿದೆ. ಕಾರ್ಯಕ್ರಮದ ಓಪನಿಂಗ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ನೇರ ಪ್ರಸಾರಗೊಳ್ಳಲಿದೆ ಎಂದು ವಾಹಿನಿಯ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ತಿಳಿಸಿದರು.
ಇದೇ ವೇಳೆ ಮಾತನಾಡಿರುವ ನಟ ಸುದೀಪ್, ಬಿಗ್ಬಾಸ್ ಶೋ ಬಗ್ಗೆ ಎಲ್ಲರಿಗೂ ಇರುವ ಕುತೂಹಲ ನನಗೂ ಇದೆ. ಹೀಗಾಗಿ ಕಾರ್ಯಕ್ರಮ ಪ್ರಸಾರಗೊಳ್ಳುವ ದಿನದವರೆಗೂ ನಾನು ಸ್ಪರ್ಧಿಗಳ ಮಾಹಿತಿ ಪಡೆದುಕೊಳ್ಳುವುದಿಲ್ಲ. ಆದರೆ ಈ ಹಿಂದಿನ ಸೀಸನ್ ಕೆಲವು ಕಾರಣಗಳಿಂದಾಗಿ ನನಗೆ ಖುಷಿ ನೀಡಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅಂಬರೀಶ್ ಮಾಮನ ನಿಧನ ನೋವು ನೀಡಿತ್ತು. ಅದೇ ವೇಳೆ ಶೂಟಿಂಗ್ನಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆಯೂ ಇತ್ತು. ಇದರ ಜೊತೆಗೆ ಕೆಲವೊಂದು ಕಾರಣದಿಂದ ಕೊನೇಯ ಬಿಗ್ಬಾಸ್ ಅಷ್ಟೊಂದು ಖುಷಿ ನೀಡಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ತಾವು ಹಿಂದಿ ಬಿಗ್ಬಾಸ್ ನೋಡುವುದಿಲ್ಲ ಎಂದ ಸುದೀಪ್, ದಬಾಂಗ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಭಾಗಿಯಾದರೂ ಈ ಬಗ್ಗೆ ಯಾವುದೇ ರೀತಿಯಾಗಿ ಮಾತನಾಡಿಲ್ಲ ಎಂದರು.