ETV Bharat / sitara

'ವಿಕ್ರಾಂತ್‌ ರೋಣ' ಸಿನಿಮಾದ ಇಂಗ್ಲಿಷ್‌ ಡಬ್ಬಿಂಗ್‌ ಪೂರ್ಣಗೊಳಿಸಿದ ಸುದೀಪ್‌ - ವಿಕ್ರಾಂತ್‌ ರೋಣ ಸಿನಿಮಾದ ಇಂಗ್ಲಿಂಷ್‌ ಡಬ್ಬಿಂಗ್‌ ಮುಗಿಸಿದ ಕಿಚ್ಚ ಸುದೀಪ್‌

ಬಹು ನಿರೀಕ್ಷಿತ ವಿಕ್ರಾಂತ್‌ ರೋಣ ಸಿನಿಮಾ ಇಂಗ್ಲಿಷ್‌ಗೂ ಡಬ್ ಆಗುತ್ತಿದೆ. ನಟ ಸುದೀಪ್‌ ಅವರು ಇಂಗ್ಲಿಷ್ ಡಬ್ಬಿಂಗ್‌ಗೆ ಧ್ವನಿ ನೀಡಿದ್ದಾರೆ. ಡಬ್ಬಿಂಗ್‌ ಕೆಲಸ ಮುಗಿದಿರುವುದನ್ನು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

actor sudeep vikranth rona movie english dubbing completed
ವಿಕ್ರಾಂತ್‌ ರೋಣ ಸಿನಿಮಾದ ಇಂಗ್ಲಿಂಷ್‌ ಡಬ್ಬಿಂಗ್‌ ಮುಗಿಸಿದ ಕಿಚ್ಚ ಸುದೀಪ್‌
author img

By

Published : Mar 3, 2022, 2:44 PM IST

Updated : Mar 3, 2022, 5:32 PM IST

ಬೆಂಗಳೂರು: ನಟ ಸುದೀಪ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವ ವಿಕ್ರಾಂತ್ ರೋಣ ಸಿನಿಮಾ ಫೆಬ್ರವರಿ ತಿಂಗಳಲ್ಲಿ ತೆರೆ ಕಾಣಬೇಕಿತ್ತು. ಆದರೆ ಕೊರೊನಾದಿಂದಾಗಿ ಆಗಸ್ಟ್ 19ಕ್ಕೆ ತೆರೆ ಕಾಣುತ್ತಿದೆ. ಸದ್ಯ ಸಿನಿಮಾ ತಂಡ‌‌ ಪೋಸ್ಟ್ ಪ್ರೊಡಕ್ಷನ್ಸ್‌ನಲ್ಲಿ ನಿರತವಾಗಿದೆ.

ಈ ಮಧ್ಯೆ ಆಗಾಗ ತಮ್ಮ ಚಿತ್ರದ ಬಗ್ಗೆ ಹೊಸ ಮಾಹಿತಿ ಕೊಡುತ್ತಿರುವ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಸುದೀಪ್ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡುತ್ತಿದ್ದಾರೆ. ಸಿನಿಮಾ ಇಂಗ್ಲಿಷ್​ನಲ್ಲೂ ತೆರೆಗೆ ಬರುತ್ತಿದೆ. ವಿಶೇಷವೆಂದರೆ ಇಂಗ್ಲಿಷ್​ನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡಿದ್ದಾರೆ. ಕನ್ನಡದ ಜನಪ್ರಿಯ ನಟರೊಬ್ಬರು ಇಂಗ್ಲಿಷ್ ಚಿತ್ರಕ್ಕೂ ತಮ್ಮದೇ ಧ್ವನಿ ನೀಡುತ್ತಿರೋದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

'ವಿಕ್ರಾಂತ್‌ ರೋಣ' ಸಿನಿಮಾದ ಇಂಗ್ಲಿಷ್‌ ಡಬ್ಬಿಂಗ್‌ ಪೂರ್ಣಗೊಳಿಸಿದ ಸುದೀಪ್‌

ಇದರ ಜೊತೆಗೆ, ಸುದೀಪ್ ಕಾಣಿಸಿಕೊಂಡಿರುವ ಸಣ್ಣ ಟೀಸರ್ ಒಂದನ್ನೂ ರಿಲೀಸ್ ಮಾಡಲಾಗಿದೆ. ಕಿಚ್ಚ ವಿಕ್ರಾಂತ್ ರೋಣನಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಸೇರಿದಂತೆ ದೊಡ್ಡ ಕಲಾವಿದರು ನಟಿಸಿದ್ದಾರೆ.

ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಪಕ ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದಾರೆ. ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಸೇರಿದಂತೆ 13ಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅಷ್ಟೇ ಅಲ್ಲ, 3ಡಿ ವರ್ಷನ್ ಬರುತ್ತಿರುವುದು ಮತ್ತೊಂದು ವಿಶೇಷ.

ಇದನ್ನೂ ಓದಿ: KGF: ಚಾಪ್ಟರ್​ 2 ಸಿನಿಮಾದಿಂದ ಹೊಸ ಮಾಹಿತಿ; ಕಾದು ಕುಳಿತಿರುವ ಸಿನಿ ರಸಿಕರಿಗೆ ಖುಷಿ ವಿಚಾರ ಹಂಚಿಕೊಂಡ ಚಿತ್ರ ತಂಡ

Last Updated : Mar 3, 2022, 5:32 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.