ETV Bharat / sitara

ಹೊಸ ಟ್ರಾಫಿಕ್ ರೂಲ್ಸ್​ ವಿರುದ್ದ ಗುಡುಗಿದ ನಟಿ ಸೋನು ಗೌಡ

ರಸ್ತೆ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಕಟ್ಟುನಿಟ್ಟಿನ ಹೊಸ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ದುಬಾರಿ ದಂಡ ತೆರಬೇಕಾದ ಈ ರೂಲ್ಸ್‌ ವಿರುದ್ಧ ಈಗಾಗಲೇ ಜನರು ಅಪಸ್ವರ ಎತ್ತಿದ್ದಾರೆ. ಕನ್ನಡದ ನಟಿ ಸೋನು ಗೌಡ ಅವರಿಗೂ ಇದು ಬಿಲ್‌ಕುಲ್ ಇಷ್ಟ ಆಗಿಲ್ಲ.

ನಟಿ ಸೋನು ಗೌಡ
author img

By

Published : Sep 7, 2019, 1:02 PM IST

ಕೇಂದ್ರ ಸರ್ಕಾರ ರಸ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇದರಿಂದ ಸಾಮಾನ್ಯ ಜನತೆ ಕಕ್ಕಾಬಿಕ್ಕಿ ಆಗಿದ್ದಾರೆ. ಸದ್ಯ ಈ ವಿಚಾರದ ಕುರಿತು ಕನ್ನಡ ನಟಿ ಸೋನು ಗೌಡ ಧ್ವನಿ ಎತ್ತಿದ್ದು, ದುಬಾರಿ ಫೈನ್​ ಹಾಕುತ್ತಿರುವುದಕ್ಕೆ ಕಿಡಿಕಾರಿದ್ದಾರೆ.

  • MY Previous tweet was regarding yesterday’s article.. it’s not against any party or individuals..collecting fine is their right, our right is to ask for good roads isn’t it? Where is 30lakhs invested on? I ve nothing against this government please understand that.. pic.twitter.com/tvtqf9HHgt

    — shruthi ramakrishna (@ssonugowda) September 7, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್‌ ಮಾಡಿರುವ ಸೋನು ಗೌಡ, ಮೊದಲು ಜನ ಸಾಮಾನ್ಯರು ಓಡಾಡುವ ರಸ್ತೆಗಳನ್ನು ಸರಿ ಮಾಡಿ. ಆಮೇಲೆ ಫೈನ್ ಕೇಳಿ ಎಂದು ಗುಡುಗಿದ್ದಾರೆ.

ನಟಿ ಸೋನು ಗೌಡ
ನಟಿ ಸೋನು ಗೌಡ

ಹೊಸ ಟ್ರಾಫಿಕ್ ನಿಯಮದಿಂದ ಭಾರಿ ದಂಡ ಕುರಿತು ಪರ ಹಾಗೂ ವಿರೋಧಾಭಿಪ್ರಾಯಗಳು ಜೋರಾಗಿ ಕೇಳಿ ಬರುತ್ತಿದೆ.

ಸೋನು ಗೌಡ ಕೂಗಿಗೆ ಬಲ ಸಿಕ್ಕುವುದೇ

ದೇಶದ ಕಾನೂನು ಅನೇಕ ಭಾರಿ ಸಾಮಾನ್ಯ ಜನತೆಗೆ ಹೊರೆ ಆಗುವುದನ್ನು ಕಂಡಿದ್ದೇವೆ. ಸಧ್ಯಕ್ಕೆ ಪ್ರಚಲಿತ ಇರುವ ಟ್ರಾಫಿಕ್ ದಂಡ ಕೇಂದ್ರ ಸರ್ಕಾರ ವಿದಿಸಿರುವುದಕ್ಕೆ ಸಾಮಾನ್ಯ ಜನತೆ ದುಬಾರಿ ಫೈನ್ ಇಂದ ಕಕ್ಕಾ ಬಿಕ್ಕಿ ಆಗಿರುವುದಂತೂ ನಿಜ. ಈ ವಿಚಾರವನ್ನೆ ಗಮನಿಸಿ ಕನ್ನಡ ಚಿತ್ರರಂಗದಿಂದ ಮೊದಲು ಧ್ವನಿ ಎತ್ತಿರುವವರು ನಟಿ ಸೋನು ಗೌಡ.

ನಟಿ ಸೋನು ಗೌಡ (ಶ್ರುತಿ ರಾಮಕೃಷ್ಣನ್ ಮೂಲ ಹೆಸರು) ಟ್ರಾಫಿಕ್ ಉಲ್ಲಂಘನೆ ಬಗ್ಗೆ ವಿದಿಸಿರುವ ಫೈನ್ ಬಗ್ಗೆ ಪ್ರಸ್ಥಾಪಿಸುತ್ತಾ ಮೊದಲು ಓಡಾಡಲು ರಸ್ತೆ ಸರಿ ಮಾಡಿ ಆಮೇಲೆ ಫೈನ್ ಕೇಳಿ ಎಂದು ಗುಡುಗಿದ್ದಾರೆ. ಸೋನು ಗೌಡ ಕೇಳಿರುವುದು ಸರಿಯಾಗಿದೆ ಎಂದು ಕೆಲವು ಪ್ರತಿಕ್ರಿಯೆ ಸಹ ಬರುತ್ತಿದೆ. ಆದರೆ ಸೋನು ಗೌಡ ಕೇಳಿರುವುದಕ್ಕೆ ಚಿತ್ರ ರಂಗದಿಂದ ಯಾರೊಬ್ಬರು ಸಪೋರ್ಟ್ ಮಾಡಿಲ್ಲ.

ಹೊಸ ಟ್ರಾಫಿಕ್ ದಂಡ ಕುರಿತು ಪರ ಹಾಗೂ ವಿರೋದ ಸಹ ಕೇಳಿಬರುತ್ತಿದೆ. ಆದರೆ ವಾಹನ ಸವಾರರು ಅನುಭವಿಸುವ ಯಾತನೆ – ಹೊಂಡ, ಹಳ್ಳ, ಅಸ್ತ ವ್ಯಸ್ತವಾದ ರೋಡುಗಳಿಂದ ಆಗುವ ಅನಾಹುತ ಮೊದಲು ತಪ್ಪಿಸಿ ಆಮೇಲೆ ಫೈನ್ ಎಂದು ಸೋನು ಗೌಡ ಹೇಳಿಕೆ ನೀಡಿದ್ದಾರೆ. ಅದು ಸಮಾಜದ ಧ್ವನಿ ಸಹ. ಮಹಾ ಜನತೆ ಕಷ್ಟ ಪಟ್ಟು ದುಡಿದ ಹಣವನ್ನು ಫೈನ್ ಕಟ್ಟುವುದರ ಮೂಲಕ ಕಳೆದು ಕೊಳ್ಳಬೇಡಿ ಎಂಬ ಕಾಳಜಿ ಸಹ ಸೋನು ಗೌಡ ವ್ಯಕ್ತ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.