ನಿರ್ದೇಶಕ ಆರ್ ಚಂದ್ರು ತೋಟಕ್ಕೆ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿ, ನಿರ್ದೇಶಕ ಅರ್ ಚಂದ್ರು ವ್ಯವಸಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನ ಅರ್ಭಟ ಆರಂಭವಾದಗಿಂದ ಮನೆಯಲ್ಲೇ ಕಾಲ ಕಳೆದಿದ್ದ ಮೈಲಾರಿ ಶಿವಣ್ಣ ಇಂದು ಪತ್ನಿ ಗೀತಾ ಜೊತೆ ಚಿಕ್ಕಬಳ್ಳಾಪುರ ಸುತ್ತಮುತ್ತ ಇರುವ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಶಿವಣ್ಣ ದಂಪತಿ ಇಲ್ಲಿನ ಕೇಶಾವರದಲ್ಲಿರುವ ಅರ್ ಚಂದ್ರು ತೋಟಕ್ಕೆ ಭೇಟಿ ನೀಡಿ ಕೆಲಹೊತ್ತು ಕಾಲ ಕಳೆದಿದ್ದಾರೆ. ಅಲ್ಲದೆ ನಿರ್ದೇಶಕನ ಕೃಷಿ ಪ್ರೀತಿಗೆ ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ಮೂಲತಃ ಕೃಷಿ ಕುಟುಂಬದ ಹಿನ್ನೆಲೆ ಹೊಂದಿರುವ ನಿರ್ದೇಶಕ ಅರ್ ಚಂದ್ರು ತಾಜ್ ಮಹಲ್ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ತಮ್ಮದೆ ಆದ ಚಾಪು ಮೂಡಿಸಿದ್ದಾರೆ. ತಮ್ಮ ಕೃಷಿ ಹಿನ್ನೆಲೆ ಮರೆಯದ ನಿರ್ದೇಶಕ ಚಂದ್ರು ಸುಮಾರು ಇಪ್ಪತ್ತು ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡಿಸಿದ್ದಾರೆ. ದ್ರಾಕ್ಷಿ, ರೇಷ್ಮೆ ಕ್ಯಾಪ್ಸಿಕಾಮ್ ಹಾಗೂ ಮೆಣಸಿಕಾಯಿ ಬೆಳೆ ಬೆಳೆದು ತೋಟವನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ.