ಡಾಲಿ ಧನಂಜಯ ನಟನೆಯ ಬಡವ ರಾಸ್ಕಲ್ ಸಿನಿಮಾದ ಫ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಿವರಾಜ್ ಕುಮಾರ್, ಕನ್ನಡ ಭಾವುಟಕ್ಕೆ ಬೆಂಕಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಭಾಷೆಗೆ ಮೊದಲು ಗೌರವ, ಮರ್ಯಾದೆ ಕೊಡಬೇಕು. ಹಾಗೇ ಯಾರನ್ನು ಕಡೆಗಣಿಬಾರದು. ನಾನು ಹುಟ್ಟಿದ್ದು ಚೆನ್ನೈನಲ್ಲಿ, ಅನಿವಾರ್ಯವಾಗಿ ಭಾಷೆಯನ್ನು ಕಲಿಯಬೇಕಾಗಿತ್ತು. ಈ ಕಾರಣಕ್ಕೆ ನಾನು ಭಾಷೆ ಕಲಿತೆ. ಪ್ರತಿಯೊಬ್ಬರು ಆಯಾ ಭಾಷೆಯನ್ನು ಪ್ರೀತಿಸಬೇಕು.
ಇನ್ನು ಕರ್ನಾಟಕದಲ್ಲಿರುವವರು ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಯಾರಿಗೂ ಪವರ್ ಇಲ್ಲ ಎಂದು ಭಾವಿಸಬಾರದು. ಕೋಪ ಬಂದಾಗ ಯಾವ ಮಟ್ಟಿಗೆ ಬೇಕಾದರೆ ಹೋಗುತ್ತದೆ. ಈ ಘಟನೆ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಭಾಷೆ ವಿಚಾರ ಅಂತಾ ಬಂದಾಗ ನಾವೆಲ್ಲರೂ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು. ಇಲ್ಲಿ ರಾಜಕೀಯ ಮಾಡಬಾರದು ಎಂದರು.
ಈಗ ಟ್ವೀಟ್ ಮಾಡುವುದು ಫ್ಯಾಷನ್ ಆಗಿದೆ. ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಇದು ಬೇರೆ ತರ ಆಗಬೇಕು. ಭಾಷೆಗಾಗಿ ಪ್ರಾಣ ಕೊಡುತ್ತೀನಿ ಎಂದು ನಾನು ಯಾವತ್ತೋ ಹೇಳಿದ್ದೀನಿ, ಈ ಒಳ್ಳೆಯ ಕೆಲಸಕ್ಕೆ ಪ್ರಾಣ ಹೋದರೆ ಹೆಮ್ಮೆ ವಿಚಾರ. ಭಾಷೆ ವಿಚಾರ ಅಂತಾ ಬಂದಾಗ ಎಲ್ಲರು ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕು ಎಂದರು.