ETV Bharat / sitara

ಯುವ ನಿರ್ದೇಶಕನ ಜೊತೆ ಹ್ಯಾಟ್ರಿಕ್ ಹೀರೋ ಹೊಸ ಸಿನಿಮಾ - ನಿರ್ದೇಶಕ ಎಚ್. ಲೋಹಿತ್

ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ 127ನೇ ಸಿನಿಮಾವನ್ನು ವರಮಹಾಲಕ್ಷ್ಮಿ ಹಬ್ಬದಂದು ಅನೌನ್ಸ್​ ಮಾಡಿದ್ದು, ಯುವ ನಿರ್ದೇಶಕನಿಗೆ ಡೈರೆಕ್ಷನ್ ಮಾಡೋದಕ್ಕೆ ಅವಕಾಶ ನೀಡಿದ್ದಾರೆ.

Actor Shivarajkumar
ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್
author img

By

Published : Aug 20, 2021, 12:41 PM IST

ಕನ್ನಡ ಚಿತ್ರರಂಗದಲ್ಲಿ ಒಂದೇ ಬಾರಿ 5-6 ಸಿನಿಮಾಗಳನ್ನು ಒಪ್ಪಿಕೊಂಡು ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​. ಇತ್ತೀಚೆಗೆಯಷ್ಟೆ ನಟ ರಿಷಬ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರಲಿರುವ ಹೊಸ ಸಿನಿಮಾಗೆ ಅವರು ಸಹಿ ಹಾಕಿದ್ದಾರೆ. ಇದೀಗ 127ನೇ ಸಿನಿಮಾವನ್ನು ವರಮಹಾಲಕ್ಷ್ಮಿ ಹಬ್ಬದಂದು ಅನೌನ್ಸ್​ ಮಾಡಿದ್ದು, ಯುವ ನಿರ್ದೇಶಕನಿಗೆ ಡೈರೆಕ್ಷನ್ ಮಾಡೋದಕ್ಕೆ ಅವಕಾಶ ನೀಡಿದ್ದಾರೆ.

ಈ ಹಿಂದೆ ಮಮ್ಮಿ, ದೇವಕಿ ಚಿತ್ರಗಳನ್ನು ನಿರ್ದೇಶನ ಮಾಡಿ ಭರವಸೆ ಮೂಡಿಸಿರುವ ನಿರ್ದೇಶಕ ಎಚ್. ಲೋಹಿತ್, ಶಿವರಾಜ್ ಕುಮಾರ್ ಸಿನಿಮಾಗೆ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ತಮಿಳುನಾಡಿನ ಗಡಿಯಲ್ಲಿರುವ ಸತ್ಯಮಂಗಳ ಕಾಡಿನ ಹೆಸರನ್ನಿಡಲಾಗಿದೆ.

Actor Shivarajkumar
ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್ ಸಿನಿಮಾದ ಟೈಟಲ್​ ರಿವೀಲ್​

ಇದೊಂದು ಥ್ರಿಲ್ಲರ್ ಜಾನರ್​ ಇರುವ ಕಥೆಯಂತೆ‌. ಶಿವರಾಜ್‌ಕುಮಾರ್‌ ಅವರ 122ನೇ ಸಿನಿಮಾ ಬೈರಾಗಿಯನ್ನು ನಿರ್ಮಾಣ ಮಾಡಿದ ಕೃಷ್ಣ ಸಾರ್ಥಕ್‌ ಎಂಬವರೇ ಈ ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿ ಯಾರು? ಯಾರೆಲ್ಲಾ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬುವುದು ಇನ್ನೂ ಪಕ್ಕಾ ಆಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.