ಬೆಂಗಳೂರು : ನಟ ಶಿವರಾಜ ಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಅಭಿಮಾನಿಯ ಆರೋಗ್ಯ ವಿಚಾರಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ನಗರದ ರಾಮಯ್ಯ ಆಸ್ಪತ್ರೆಯಲ್ಲಿ ಮಲ್ಲಿ ಎಂಬ ಅಭಿಮಾನಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತ ಹಲವು ವರ್ಷಗಳಿಂದ ರಾಜ್ ಫ್ಯಾಮಿಲಿಯ ಕಟ್ಟಾ ಅಭಿಮಾನಿ. ಅಲ್ಲದೆ ಮಲ್ಲಿ ಶಿವು ಅಡ್ಡ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ. ಬಿಪಿ ವೇರಿರೇಷನ್ನಿಂದ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಸ್ಪತ್ರಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಷಯ ತಿಳಿದ ಶಿವಣ್ಣ ಇಂದು ಆಸ್ಪತ್ರಗೆ ಭೇಟಿ ನೀಡಿ, ತಮ್ಮ ಅಭಿಮಾನಿಯ ಆರೋಗ್ಯ ವಿಚಾರಿಸಿದ್ರು.