ಶಿವಣ್ಣ ಆನಂದ್ ಚಿತ್ರದಲ್ಲಿ ನಟಿಸುತ್ತಿರುವುದು ಹಳೆಯ ವಿಚಾರ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇದೀಗ ಚಿತ್ರತಂಡದಿಂದ ಹೊಸ ಸುದ್ದಿ ಹೊರಬಿದ್ದಿದೆ.
ಸೆಂಚ್ಯೂರಿ ಸ್ಟಾರ್ ಶಿವರಾಜಕುಮಾರ್ ಅವರ 'ಆನಂದ' ಚಿತ್ರದಲ್ಲಿ ತಮಿಳು ಚಿತ್ರರಂಗ ಸೂಪರ್ ಸ್ಟಾರ್ ಶಿವಾಜಿ ಗಣೇಶನ್ ಅವರ ಮಗ ನಟ ಶಿವಾಜಿ ಪ್ರಭು ಅಭಿನಯಿಸಿದ್ದಾರೆ. ಹಾಗೇ ಬಂಧನ ಖ್ಯಾತಿಯ ಸುಹಾಸಿನಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. 20 ವರ್ಷಗಳ ಹಿಂದೆ 'ವಿಶ್ವ' ಚಿತ್ರದಲ್ಲಿ ಶಿವಣ್ಣ ಜತೆ ಸುಹಾಸಿನಿ ನಟಿಸಿದ್ದರು.
ಇನ್ನು ಶಿವಾಜಿ ಪ್ರಭು ಅವರಿಗೆ ಇದು ಮೊದಲ ಕನ್ನಡ ಚಿತ್ರವಲ್ಲ. ಈ ಹಿಂದೆ ದರ್ಶನ್ ನಟನೆಯ 'ಬಾಸ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ ಅವರು, ದೃಶ್ಯ ಹಾಗೂ ಪುನೀತ್ ರಾಜ್‌ಕುಮಾರ್ ಅಭಿನಯದ 'ಪವರ್' ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಇದೇ ಮೊದಲ ಬಾರಿಗೆ ಶಿವರಾಜ್ಕುಮಾರ್ ಜೊತೆ ಬಣ್ಣ ಹಚ್ಚಿದ್ದಾರೆ. ಪಿ.ವಾಸು ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಅನಂತ್ ನಾಗ್ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ನಟಿಸಿದ್ದಾರೆ. ದ್ವಾರಕೀಶ್ ಬ್ಯಾನರ್ನಲ್ಲಿ ಆನಂದ್ ಸಿನಿಮಾ ನಿರ್ಮಾಣವಾಗುತ್ತಿದೆ.