ಬಣ್ಣದ ಪ್ರಪಂಚ ದಿನೇ ದಿನೇ ಹೊಸಬರನ್ನ ಸೆಳೆಯುತ್ತಿದ್ದು, ಇಲ್ಲೊಂದು ಹೊಸಬರ ಟೀಮ್, 'ಜಗ್ಗಿ ಮತ್ತು ಜಾನು' ಎಂಬ ಟೈಟಲ್ನೊಂದಿಗೆ ಗಾಂಧಿ ನಗರಕ್ಕೆ ಕಾಲಿಡುತ್ತಿದೆ. ಸ್ಯಾಂಡಲ್ವುಡ್ ಅಧ್ಯಕ್ಷ ನಟ ಶರಣ್ ಈ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿ, ಈ ಹೊಸ ಟೀಮ್ಗೆ ಬೆನ್ನು ತಟ್ಟಿದ್ದಾರೆ.
ಕ್ಯಾಚೀ ಟೈಟಲ್ ಹೊಂದಿರುವ 'ಜಗ್ಗಿ ಮತ್ತು ಜಾನು' ಚಿತ್ರದ ಪ್ರೇಮ ಕಹಾನಿಯಲ್ಲಿ ಜೈ ಶೆಟ್ಟಿ, ಎಂಬ ಯುವನಟ ಜಗ್ಗಿ ನಾಯಕನಾಗಿ ಕಾಣಿಸಿಕೊಂಡಿದ್ದರೆ, 'ಹೆತ್ತವರು ಕನಸು' ಸಿನಿಮಾದ ಬಳಿಕ, ಸುಮಾರು ಆರು ವರ್ಷಗಳ ಬಳಿಕ ವಿದ್ಯಾ ವಿಜಯ್, ಜಾನು ಕ್ಯಾರೆಕ್ಟರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುವ ನಿರ್ದೇಶಕ ಜಗನ್ನಾಥ್ ನಿದೇಶಿಸಿರುವ ಈ ಚಿತ್ರಕ್ಕೆ ಮಂಜುನಾಥ್ ಸಂಗೀತವಿದ್ದು, ಕೌರವ ವೆಂಕಟೇಶ್ ಈ ಸಿನಿಮಾಕ್ಕೆ ಸಾಹಸ ಸಂಯೋಜನೆ ಮಾಡಲಿದ್ದಾರೆ.
ಕಿರುಚಿತ್ರಗಳನ್ನ ನಿರ್ದೇಶನ ಮಾಡುತ್ತಿದ್ದ ಜಗನ್ನಾಥ್, ಈ ಚಿತ್ರದ ಮೂಲಕ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಉಮೇಶ್ ಎಂ.ಕತ್ತಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ದೀಪಾವಳಿಗೆ ಸೆಟ್ಟೇರಲಿರುವ ಜಗ್ಗಿ ಮತ್ತು ಜಾನು ಚಿತ್ರದ ಪೋಸ್ಟರ್ ಅನ್ನು ಶರಣ್ ಬಿಡುಗಡೆ ಮಾಡಿ ಈ ಹೊಸ ತಂಡಕ್ಕೆ ಶುಭ ಹಾರೈಯಿಸಿದ್ದಾರೆ.