ಸ್ಯಾಂಡಲ್ವುಡ್ನ ಪೈಸಾ ವಸೂಲು ಹೀರೋ ಅಂತಾ ಕರೆಸಿಕೊಂಡಿರುವ ನಟ ಶರಣ್, ಕೆಲವು ದಿನಗಳ ಹಿಂದೆ ವಿಷಲ್ ಹೊಡೆಯುವ ಮೂಲಕ ಕುತೂಹಲ ಹುಟ್ಟಿಸಿದ್ರು. ಯಾರು ಏನೇ ಹೇಳಲಿ, ಯಾರು ಏನೇ ಕೇಳಿದ್ರು ಶರಣ್ ವಿಷಲ್ ಹೊಡೆಯುವ ಮೂಲಕ ಉತ್ತರಿಸುತ್ತಿದ್ರು.
ಶರಣ್ ಯಾಕೆ ಹೀಗೆ ವಿಷಲ್ ಹೊಡೆಯುತ್ತಿದ್ರು ಅನ್ನೋದು ಕುತೂಹಲ ಹುಟ್ಟಿಸಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಶರಣ್ಗೆ ಬಹುಕಾಲದ ಗೆಳೆಯ ತರುಣ್ ಸುಧೀರ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆದ್ರಿಂದ ಗೆಳೆಯನಿಗೆ ಶರಣ್ ಒಂದು ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಹೌದು.. ಶರಣ್ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡುವ ಮೂಲಕ ವಿಷಲ್ ಇರುವ ಸಿನಿಮಾ ಪೋಸ್ಟರ್ ಅನ್ನು ರಿವೀಲ್ ಮಾಡಿದ್ದಾರೆ. ವಿಶೇಷ ಅಂದ್ರೆ ತರುಣ್ ಸುಧೀರ್ ಚೊಚ್ಚಲ ಪ್ರೊಡಕ್ಷನ್ನಲ್ಲಿ ಈ ಸಿನಿಮಾ ಮೂಡಿ ಬರಲಿದೆ.
ತರುಣ್ ಸುಧೀರ್ ಹುಟ್ಟು ಹಬ್ಬದ ದಿನದಂದು ಶರಣ್ ಈ ಹೊಸ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿದ್ದಾರೆ. ತರುಣ್ ಸುಧೀರ್ ಕ್ರಿಯೇಟಿವ್ಸ್ ಎಂಬ ಹೆಸರಲ್ಲಿ ಈ ಪ್ರೊಡಕ್ಷನ್ ಶುರು ಮಾಡಿದ್ದಾರೆ. ಆದರೆ ಸಿನಿಮಾದ ಟೈಟಲ್ ಏನು ಅನ್ನೋದು ಫೈನಲ್ ಆಗಿಲ್ಲ.

ಲಡ್ಡು ಸಿನಿಮಾ ಹೌಸ್ನಲ್ಲಿ ಶರಣ್ ಕೃಷ್ಣ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಜಂಟಲ್ ಮ್ಯಾನ್ ಸಿನಿಮಾ ನಿರ್ದೇಶನ ಮಾಡಿದ್ದ ಜಡೇಶ ಹಂಪಿ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಶರಣ್, ಇವತ್ತು ನನ್ನ ಮಲ್ಟಿ ಟ್ಯಾಲೆಂಟ್ ನಟ, ನಿರ್ದೇಶಕ, ಗೆಳೆಯ ತರುಣ್ ಸುಧೀರ್ ಹುಟ್ಟು ಹಬ್ಬ. ಅವನ ಎಲ್ಲಾ ಕೆಲಸಗಳು ಯಶಸ್ಸು ಆಗಲಿ, ಆ ಭಗವಂತ ಸದಾ ನಿಮ್ಮ ಜೊತೆಗೆ ಇರಲಿ ಅಂತಾ ಶರಣ್ ತರುಣ್ ಸುಧೀರ್ಗೆ ವಿಶ್ ಮಾಡಿದ್ದಾರೆ.