ಮಂಡ್ಯ ಭಾಷೆ ಮೂಲಕವೇ ಸ್ಯಾಂಡಲ್ವುಡ್ನಲ್ಲಿ ಛಾಪು ಮೂಡಿಸಿರುವ ನಟ ಸತೀಶ್ ನೀನಾಸಂ. 'ಅಯೋಗ್ಯ' ಸಿನಿಮಾ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿರುವ ಸತೀಶ್ ನೀನಾಸಂ ಗೋದ್ರಾ, ಮೈ ನೇಮ್ ಇಸ್ ಸಿದ್ದೇಗೌಡ, ಪರಿಮಳ ಲಾಡ್ಜ್ ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಪಂಚರಂಗಿ ಸಿನಿಮಾದ ಆರಂಭದ ದಿನಗಳಿಂದಲೂ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವ ಸತೀಶ್ ನೀನಾಸಂ ಈಗಲೂ ಸಖತ್ ವರ್ಕೌಟ್ ಮಾಡುತ್ತಿದ್ದಾರೆ. ಕಳೆದ 6 ತಿಂಗಳಿಂದ ಜಿಮ್ ತೆಗೆಯದೆ ಸತೀಶ್ ಮನೆಯಲ್ಲೇ ವರ್ಕೌಟ್ ಮಾಡುತ್ತಿದ್ದರು. ಆದರೆ ಇದೀಗ ತಪ್ಪದೆ ಜಿಮ್ಗೆ ಹಾಜರಾಗಿ ಫಿಟ್ನೆಸ್ ಮೇಂಟೇನ್ ಮಾಡುತ್ತಿದ್ದಾರೆ. ವರ್ಕೌಟ್ ಮಾಡದೆ ಬೇರೆ ಯಾವ ಕೆಲಸವನ್ನೂ ಮಾಡುವುದಿಲ್ಲವಂತೆ ಸತೀಶ್.
ಲಾಕ್ಡೌನ್ ಸಮಯದಲ್ಲಿ ಜಿಮ್ ಇಲ್ಲದೆ ಕಷ್ಟ ಆಗಿದ್ದರಿಂದ ತಮ್ಮ ರಾಜರಾಜೇಶ್ವರಿ ನಗರದಲ್ಲಿರುವ ಆಫೀಸನ್ನೇ ಸುಮಾರು 4 ತಿಂಗಳ ಕಾಲ ಜಿಮ್ ಮಾಡಿಕೊಂಡಿದ್ರಂತೆ. ಜಿಮ್ ಯಾವಾಗ ಓಪನ್ ಆಗುವುದೋ ಕಾಯುತ್ತಿದ್ದೆ ಎನ್ನುವ ಸತೀಶ್ ಈಗ ಜಿಮ್ನಲ್ಲಿ ಸುಮಾರು 2 ಗಂಟೆಗಳ ಕಾಲ ಬೆವರು ಇಳಿಸ್ತಾರಂತೆ. ಬೆಳಗ್ಗೆ 1 ಗಂಟೆ, ಸಂಜೆ 1 ಗಂಟೆ ತಪ್ಪದೆ ಜಿಮ್ಗೆ ಹೋಗುತ್ತಾರೆ ಸತೀಶ್. ವರ್ಕೌಟ್ ಮಾತ್ರವಲ್ಲ, ಅದರ ಜೊತೆ ಜೊತೆಗೆ ಸ್ಟ್ರಿಕ್ಟ್ ಡಯಟ್ ಫಾಲೋ ಮಾಡ್ತಾರಂತೆ.
ಜಿಮ್ ಮುಗಿಸಿದ ನಂತರ ಹಣ್ಣು, ತರಕಾರಿಗಳು, ಚಪಾತಿ ಮತ್ತು ಹಣ್ಣಿನ ಜ್ಯೂಸ್ , ಇನ್ನು ಮಧ್ಯಾಹ್ನದ ಊಟಕ್ಕೆ ಮಿಸ್ ಮಾಡದೆ ರಾಗಿ ಮುದ್ದೆ ಸೊಪ್ಪಿನ ಸಾರು, ಹಣ್ಣಿನ ಸಲಾಡ್ ರಾತ್ರಿ ಮತ್ತೆ ಮುದ್ದೆ ಅಥವಾ ಚಪಾತಿ ಸೇವಿಸುತ್ತಾರಂತೆ. ಈ ಫಿಟ್ನೆಸ್ನಿಂದ ಸಿನಿಮಾಗಳಿಗೆ ಬಹಳ ಸಹಾಯವಾಗ್ತಿದೆ ಎನ್ನುತ್ತಾರೆ ನೀನಾಸಂ ಸತೀಶ್.