ETV Bharat / sitara

ಕತ್ರಿನಾಗೆ ಕೋಟ್ಯಂತರ ರೂ. ಮೌಲ್ಯದ ರೇಂಜ್​ ರೋವರ್​​ ಗಿಫ್ಟ್ ನೀಡಿದ ಮಾಜಿ ಲವರ್​ ಸಲ್ಲು!?

author img

By

Published : Dec 17, 2021, 4:20 AM IST

ಬಾಲಿವುಡ್​ನ ಕ್ಯೂಟ್​​ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಅವರಿಗೆ ಉಡುಗೊರೆಗಳ ಸರಮಾಲೆ ಹರಿದು ಬರುತ್ತಿವೆ.

Actor salman khan Gift
Actor salman khan Gift

ಮುಂಬೈ: ಡಿಸೆಂಬರ್​ 9ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್​​ನ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ಗೆ ಇದೀಗ ಉಡುಗೊರೆಗಳ ಸುರಿಮಳೆ ಆಗ್ತಿದ್ದು, ಲಭ್ಯವಾಗಿರುವ ಮಾಹಿತಿ ಪ್ರಕಾರ ಮಾಜಿ ಪ್ರಿಯಕರ ಸಲ್ಮಾನ್​ ಖಾನ್​ ದುಬಾರಿ ಗಿಫ್ಟ್ ನೀಡಿದ್ದಾರೆಂದು ತಿಳಿದು ಬಂದಿದೆ.

Actor salman khan Gift
ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿರುವ ಸಲ್ಲು-ಕತ್ರಿನಾ

ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಹೊರಗುಳಿದಿದ್ದ ಸಲ್ಮಾನ್ ಖಾನ್​​ ಇದೀಗ ಮೂರು ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಕಾರು ಉಡುಗೊರೆಯಾಗಿ ನೀಡಿದ್ದಾರೆಂದು ಹೇಳಲಾಗಿದೆ.

ಸಲ್ಮಾನ್ ಖಾನ್​ ಹಾಗೂ ಕತ್ರಿನಾ ಕೈಫ್​ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆ ಈ ಜೋಡಿ ಸುತ್ತಾಟ ನಡೆಸಿತ್ತು. ಆದರೆ, ಇದನ್ನ ಗುಟ್ಟಾಗಿ ಇಟ್ಟಿದ್ದರು. ಈ ಸಂಬಂಧ ಹೆಚ್ಚು ಕಾಲ ಉಳಿದುಕೊಳ್ಳದ ಕಾರಣ ಬ್ರೇಕ್ ​​ಅಪ್​ ಆಗಿತ್ತು. ಇದರ ಹೊರತಾಗಿ ಕೂಡ ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ. ಇದೇ ಕಾರಣಕ್ಕಾಗಿ ಇದೀಗ ದುಬಾರಿ ಮೌಲ್ಯದ ಕಾರು ಗಿಫ್ಟ್ ನೀಡಿದ್ದಾರೆಂದು ವರದಿಯಾಗಿದೆ.

Actor salman khan rs 3 crore wedding Gift
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಕ್ಕಿ-ಕತ್ರಿನಾ

ಇದನ್ನೂ ಓದಿರಿ: ಸಾವು ಗೆದ್ದ ದಿವ್ಯಾಂಶಿ... ಕೊಳವೆ ಬಾವಿಗೆ ಬಿದ್ದಿದ್ದ 1 ವರ್ಷದ ಬಾಲಕಿಯ ರಕ್ಷಣೆ

ಇದರ ಜೊತೆಗೆ ನಟ ರಣಬೀರ್ ಕಪೂರ್​,ಆಲಿಯಾ ಭಟ್​ ಸೇರಿದಂತೆ ಅನೇಕರು ದುಬಾರಿ ಮೌಲ್ಯದ ಗಿಫ್ಟ್ ಉಡುಗೊರೆಯಾಗಿ ನೀಡಿದ್ದಾರೆಂದು ಹೇಳಲಾಗುತ್ತಿದೆ. ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿರುವ ಈ ಜೋಡಿ ಇದೀಗ ಡಿಸೆಂಬರ್​ 20ರಂದು ಮುಂಬೈನಲ್ಲಿ ಕೆಲ ಸೆಲೆಬ್ರಿಟಿಗಳಿಗೆ ಔತಣಕೂಟ ಏರ್ಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.