ETV Bharat / sitara

ಅಪ್ಪು ನೆನೆದು ಭಾವುಕರಾದ ಡೈಲಾಗ್ ಕಿಂಗ್ ಸಾಯಿಕುಮಾರ್ - ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್​ಕುಮಾರ್ ಸಮಾಧಿ

ಶಿವಣ್ಣನ ಜೊತೆ ರಾಘಣ್ಣನ ಮಗನ ಜೊತೆ ನಟಿಸಿದ್ದೇನೆ. ಅಪ್ಪು ಜತೆ ಆ್ಯಕ್ಟ್ ಮಾಡಬೇಕು ಎನ್ನುವ ಆಸೆ ಇತ್ತು. ನಂತರ ಯುವರತ್ನ (Yuvaratna) ಚಿತ್ರದಲ್ಲಿ ನಟಿಸಿದ್ದೆ. ಆದ್ದರಿಂದ ನಮ್ಮ ಜತೆ ಇದ್ದಾರೆ ಎನ್ನುವ ಫೀಲಿಂಗ್ ಬರುತ್ತಿದೆ ಎಂದರು..

Sai Kumar visit to Kanteerava Studio
ಡೈಲಾಗ್ ಕಿಂಗ್ ಸಾಯಿಕುಮಾರ್
author img

By

Published : Nov 13, 2021, 4:48 PM IST

ಬೆಂಗಳೂರು: ಕಳೆದ ತಿಂಗಳು ಅಕ್ಟೋಬರ್ 29ರಂದು ಸ್ಯಾಂಡಲ್​ವುಡ್​ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ (Actor Puneeth Rajkumar)​ ಹೃದಯಾಘಾತದಿಂದ ನಿಧನರಾದರು. ಇಂದು (ನ.13) ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್​ಕುಮಾರ್​, ಪಾರ್ವತಮ್ಮ ರಾಜ್​ಕುಮಾರ್ ಹಾಗೂ ಅಣ್ಣಾವ್ರ ಸಮಾಧಿಗೆ ಬಹುಭಾಷಾ ನಟ ಸಾಯಿಕುಮಾರ್ (Actor Sai Kumar) ಭೇಟಿ ನೀಡಿದರು.

ಅಪ್ಪು ನೆನೆದು ಭಾವುಕರಾದ ಡೈಲಾಗ್ ಕಿಂಗ್ ಸಾಯಿಕುಮಾರ್

ಈ ವೇಳೆ ಮಾತನಾಡಿದ ಅವರು, ಆ ಭಗವಂತ ಅಪ್ಪು ಆತ್ಮಕ್ಕೆ ಶಾಂತಿ ನೀಡಲಿ. We Love you, We Miss you ಅಪ್ಪು ಎಂದು ಹೇಳುತ್ತ ಭಾವುಕರಾದರು.

ಕಂಠೀರವ ಸ್ಟುಡಿಯೋಗೆ (Sai Kumar visit to Kanteerava Studio) ಬಂದು ಶೂಟಿಂಗ್ ಮಾಡುತ್ತಿದ್ದೇವೆ ಎಂದು ಈಗಲೂ ಅನ್ನಿಸುತ್ತಿದೆ. ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ ಎಂದು ನಂಬಲು ಆಗುತ್ತಿಲ್ಲ ಎಂದು ಹೇಳಿದರು.

ಶಿವಣ್ಣನ ಜೊತೆ ರಾಘಣ್ಣನ ಮಗನ ಜೊತೆ ನಟಿಸಿದ್ದೇನೆ. ಅಪ್ಪು ಜತೆ ಆ್ಯಕ್ಟ್ ಮಾಡಬೇಕು ಎನ್ನುವ ಆಸೆ ಇತ್ತು. ನಂತರ ಯುವರತ್ನ (Yuvaratna) ಚಿತ್ರದಲ್ಲಿ ನಟಿಸಿದ್ದೆ. ಆದ್ದರಿಂದ ನಮ್ಮ ಜತೆ ಇದ್ದಾರೆ ಎನ್ನುವ ಫೀಲಿಂಗ್ ಬರುತ್ತಿದೆ ಎಂದರು.

ದೇವರನ್ನು ತುಂಬ ನಂಬುತ್ತೇನೆ. ಆದರೆ, ಇಗೀಗ ದೇವರ ಮೇಲೆ ತುಂಬ ಕೋಪ ಬರುತ್ತಿದೆ. ನನ್ನ ಮಗಳು, ಅಳಿಯನ ಪ್ರಾಜೆಕ್ಟ್ ಲಾಂಚ್ ಮಾಡಲು ಬಂದಿದ್ದರು. ನಮ್ಮ ಜೀವನ ಕ್ಷಣಿಕ.

ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ, ನಾವು ದೇಶಕ್ಕಾಗಿ ಏನು ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಅಂತಹ ಸೇವೆಗಳನ್ನು ಪುನೀತ್ ಸಮಾಜಕ್ಕಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಓದಿ: ಪುನೀತ್​ ಸಮಾಧಿಗೆ ಭೇಟಿ ನೀಡಿದ ನಟ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.