ETV Bharat / sitara

ಕನ್ನಡದ ಅನ್ನ ತಿಂದಿದ್ದೇನೆ..ಡಬ್ಬಿಂಗ್​​​​ ಕೆಲಸ ನನಗೆ ಬೇಡವೇ ಬೇಡ: ರಾಕ್​​​ಲೈನ್ ಸುಧಾಕರ್​

ಸ್ಯಾಂಡಲ್​​​ವುಡ್​​ನಲ್ಲಿ ಪರಭಾಷಾ ಚಿತ್ರಗಳೊಂದಿಗೆ ನಡುವೆ ಡಬ್ಬಿಂಗ್ ಚಿತ್ರಗಳ ಹಾವಳಿ ಕೂಡಾ ಹೆಚ್ಚಾಗಿದೆ. ಆದರೆ ನಾನು ಎಂದಿಗೂ ಡಬ್ಬಿಂಗ್ ಸಿನಿಮಾಗಳಿಗೆ ಪ್ರೋತ್ಸಾಹಿಸುವುದಿಲ್ಲ. ಅಲ್ಲದೆ ಪರಭಾಷಾ ಸಿನಿಮಾಗಳಿಗೆ ಕನ್ನಡ ಡಬ್ ಕೂಡಾ ಮಾಡುವುದಿಲ್ಲ ಎಂದು ರಾಕ್​​ಲೈನ್ ಸುಧಾಕರ್ ಹೇಳುತ್ತಾರೆ.

ರಾಕ್​​​ಲೈನ್ ಸುಧಾಕರ್​
author img

By

Published : Jul 29, 2019, 10:14 AM IST

ಈಗಾಗಲೇ ಸಾಕಷ್ಟು ಡಬ್ಬಿಂಗ್ ಸಿನಿಮಾಗಳು ಸ್ಯಾಂಡಲ್​​​ವುಡ್​​ಗೆ ಲಗ್ಗೆ ಇಟ್ಟಿವೆ. ಆದರೆ ಬಿಡುಗಡೆಯಾದ ಡಬ್ಬಿಂಗ್ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿವೆ. ಕಳೆದ ವಾರ ಬಿಡುಗಡೆಯಾದ 'ಡಿಯರ್ ಕಾಮ್ರೇಡ್​​​' ಕೂಡಾ ಒಳ್ಳೆ ಪ್ರತಿಕ್ರಿಯೆ ಪಡೆದಿಲ್ಲ.

sudhakar
ರಾಕ್​​​ಲೈನ್ ಸುಧಾಕರ್​

ಡಬ್ಬಿಂಗ್ ಸಿನಿಮಾಗಳನ್ನು ಕನ್ನಡಕ್ಕೆ ತರುವವರು ಅದನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ಜನಪ್ರಿಯ ನಟರ ಕಂಠವನ್ನು ಉಪಯೋಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಟರ ಕಂಠವನ್ನು ಬಳಸಿಕೊಳ್ಳುವ ಮೂಲಕವಾದರೂ ಡಬ್ಬಿಂಗ್ ಸಿನಿಮಾಗಳಿಗೆ ಬಾಕ್ಸ್ ಆಫೀಸ್​​ ಗಳಿಸಿಕೊಳ್ಳುವ ಪ್ರಯತ್ನ ಇದು. ಡಬ್ಬಿಂಗ್ ವಿಚಾರವಾಗಿ ರಾಕ್​​​​ಲೈನ್ ವೆಂಕಟೇಶ್ ಅವರ ಗರಡಿಯಲ್ಲಿ ದಶಕಗಳ ಕಾಲ ಪಳಗಿರುವ ರಾಕ್​​ಲೈನ್ ಸುಧಾಕರ್ ಅವರನ್ನು ಕೇಳಿದಾಗ 'ನಾನು ಹಸಿವಿನಿಂದ ಬೇಕಾದರೂ ಇದ್ದು ಬಿಡುತ್ತೇನೆ ಆದರೆ ಆ ರೀತಿ ಕೆಲಸ ನನಗೆ ಬೇಡ' ಎಂದು ಕಡ್ಡಿ ತುಂಡು ಮಾಡಿದ ಹಾಗೆ ಹೇಳುತ್ತಾರೆ.

ಯೋಗರಾಜ್​​ ಭಟ್ಟರ ‘ಪಂಚರಂಗಿ’ ಸಿನಿಮಾದಿಂದ ಕಲಾವಿದರಾಗಿ ಗುರುತಿಸಿಕೊಂಡ ರಾಕ್​​​​ಲೈನ್ ಸುಧಾಕರ್​​​​ ಆರು ವರ್ಷಗಳಲ್ಲಿ ಸುಮಾರು 180 ಸಿನಿಮಾಗಳಲ್ಲಿ ನಟಿಸಿ ಹೆಸರಾಗಿರುವವರು. 'ಕನ್ನಡದ ಅನ್ನ ಉಂಡಿರುವವ ನಾನು, ಪ್ರೇಕ್ಷಕರು, ಮಾಧ್ಯಮಗಳು ನನ್ನನ್ನು ಬಹಳವಾಗಿ ಪ್ರೋತ್ಸಾಹ ಮಾಡುತ್ತಿದ್ದಾರೆ. ಡಬ್ಬಿಂಗ್ ಸಿನಿಮಾಕ್ಕೆ ನನ್ನ ಕಂಠದಾನ ಮಾಡಲು ಸಾಧ್ಯವೇ ಇಲ್ಲ. ಅಷ್ಟೊಂದು ಕಷ್ಟ ಬಂದರೆ ಪರಭಾಷೆಯಲ್ಲೇ ಅಭಿನಯಿಸೋಣ ಅದಕ್ಕೆ ನಾನೇ ಡಬ್ ಮಾಡುತ್ತೇನೆ ಆದರೆ ಡಬ್ಬಿಂಗ್ ಸಿನಿಮಾ ಬೇಡವೇ ಬೇಡ' ಎನ್ನುತ್ತಾರೆ ರಾಕ್ ಲೈನ್ ಸುಧಾಕರ್.

ರಾಕ್ ಲೈನ್ ಸುಧಾಕರ್ ಅವರ ದಿಟ್ಟ ನಿರ್ಧಾರ

ಕರ್ನಾಟಕದಲ್ಲಿ ಡಬ್ಬಿಂಗ್ ಸಿನಿಮಗಳು ಪರಭಾಷೆ ಇಂದ ಹಲವಾರು ಈಗಾಗಲೇ ಲಗ್ಗೆ ಇಟ್ಟಿದೆ. ಬಿಡುಗಡೆ ಆದ ಪರಭಾಷಾ ಡಬ್ಬಿಂಗ್ ಸಿನಿಮಗಳು ಹೇಳ ಹೆಸರಿಲ್ಲದಂತೆ ಕೊಚ್ಚಿ ಹೋಗಿದೆ. ಕಳೆದ ವಾರ ಏಕ ಕಾಲದಲ್ಲಿ ಬಿಡುಗಡೆ ಆದ ಡಿಯರ್ ಕಾಮ್ರೇಡ್ ಸಹ ಒಳ್ಳೆಯ ಪ್ರತಿಕ್ರಿಯೆ ಪಡೆದಿಲ್ಲ.

ಈಗ ಡಬ್ಬಿಂಗ್ ಸಿನಿಮಾಗಳನ್ನು ಕನ್ನಡಕ್ಕೆ ತರುವವರು ಜನಪ್ರಿಯ ನಟರುಗಳ (ಸೂಪರ್ ಸ್ಟಾರ್ಸ್ ಬಿಟ್ಟು) ಕಂಠವನ್ನು ಉಪಯೋಗಿಸುವುದಕ್ಕೆ ಪ್ರಯತ್ನ ನಡೆಸುತ್ತಿದೆ. ಕನ್ನಡದ ನಟರುಗಳ ಸಂಭಾಷಣೆ ಇಂದಲಾದರೂ ಡಬ್ಬಿಂಗ್ ಸಿನಿಮಾಗಳಿಗೆ ಬಾಕ್ಸ್ ಆಫೀಸು ಗಳಿಕೆ ಪ್ರಯತ್ನ ಇದು.

ಈ ವಿಚಾರವಾಗೆ ಹೆಸರಾಂತ ಪೋಷಕ ನಟ ರಾಕ್ ಲೈನ್ ಸುಧಾಕರ್ ಅವರನ್ನು ಸಂಪರ್ಕಿಸಲಾಯಿತು. ನಮ್ ತಾಯಾಣೆ ಯಾರಾದ್ರೂ ಡಬ್ಬಿಂಗ್ ಸಿನಿಮಾ ಪಾತ್ರಗಳಿಗೆ ನನ್ನನ್ನು ಡಬ್ ಮಾಡಿಕೊಡಿ ಎಂದು ಕೇಳಿದರೆ ಹೋಗುವುದಿಲ್ಲ. ನಾನು ಹಸಿವಿನಿಂದ ಬೇಕಾದರೂ ಇದ್ದು ಬಿಡುತ್ತೇನೆ ಆದರೆ ಆ ರೀತಿ ಕೆಲಸ ನನಗೆ ಬೇಡ ಎಂದು ಕಡ್ಡಿ ತುಂಡು ಮಾಡಿದ ಹಾಗೆ ರಾಕ್ ಲೈನ್ ಸುಧಾಕರ್ ಹೇಳುತ್ತಾರೆ.

ದಶಕಗಳ ಕಾಲ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಗರಡಿಯಲ್ಲಿ ಇದ್ದವರು ರಾಕ್ಲೈನ್ ಸುಧಾಕರ್ ಪಂಚತಂತ್ರ ಸಿನಿಮಾ ಇಂದ ಕಲಾವಿದರಾಗಿ ಗುರುತಿಸಿಕೊಂಡವರು. ಈ ಹೊತ್ತಿಗೆ ಆರು ವರ್ಷಗಳಲ್ಲಿ ಅವರು 180 ಸಿನಿಮಾಗಳಲ್ಲಿ ಅಭಿನಯ ಮಾಡಿ ಪ್ರಕ್ಯತರಾಗಿದ್ದಾರೆ. ಇವರ ಮಾತಿನ ವಿಶೇಷ ಶೈಲಿ ಪ್ರೇಕ್ಷಕರಿಗೆ ತುಂಬಾ ಹಿಡಿಸಿಬಿಟ್ಟಿದೆ. ಅಂದರೆ ವರ್ಷಕ್ಕೆ 30 ಸಿನಿಮಾ ಅನ್ನುವಷ್ಟು ಅವರ ಜನಪ್ರಿಯತೆ ಮಟ್ಟ ಇದೆ. ಕನ್ನಡದ ಅನ್ನ ಉಂಡಿರುವವ ನಾನು, ಪ್ರೇಕ್ಷಕರು, ಮಾಧ್ಯಮ ಬಹಳವಾಗಿ ಪ್ರೋತ್ಸಾಹ ಮಾಡುತ್ತಾರೆ. ನಾನು ಡಬ್ಬಿಂಗ್ ಸಿನಿಮಾಕ್ಕೆ ನನ್ನ ಕಂಠ ದಾನ – ಛಾನ್ಸ್ ಇಲ್ಲವೇ ಇಲ್ಲ ಅನ್ನುತ್ತಾರೆ.

ಅಷ್ಟೊಂದು ಕಷ್ಟ ಬಂದರೆ ಪರಭಾಷೆಯಲ್ಲಿ ಅಭಿನಯ ಮಾಡೋಣ ಹಾಗೂ ನನ್ನ ಕಂಠ ಸಹ ನೀಡುತ್ತೇನೆ. ಆದರೆ ಡಬ್ಬಿಂಗ್ ಸಿನಿಮಾ ಕೆಲಸ ನನಗೆ ಬೇಡವೇ ಬೇಡ ಎನ್ನುತ್ತಾರೆ ರಾಕ್ ಲೈನ್ ಸುಧಾಕರ್. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.