ETV Bharat / sitara

Drugs Case​: ಇಡಿ ವಿಚಾರಣೆಗೆ ಹಾಜರಾದ ಟಾಲಿವುಡ್​ ಮಾಸ್​ ಮಹಾರಾಜ ರವಿತೇಜ - Drugs Case,

ತೆಲುಗು ಚಿತ್ರರಂಗದಲ್ಲಿ ಕೇಳಿಬಂದ ಡ್ರಗ್ ಡೀಲಿಂಗ್ ಕೇಸ್​ನಲ್ಲಿ ಖ್ಯಾತ ನಟ ರವಿತೇಜ ಅವರನ್ನು ಇಡಿ ವಿಚಾರಣೆಗೊಳಪಡಿಸಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್​ ಕೇಸ್​(Drugs Case)ನಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು.

actor-raviteja-
ನಟ ರವಿತೇಜಾ
author img

By

Published : Sep 9, 2021, 1:57 PM IST

Updated : Sep 9, 2021, 2:20 PM IST

ಹೈದರಾಬಾದ್: ಡ್ರಗ್ಸ್​ ಪ್ರಕರಣ​(Drugs Case) ಸಂಬಂಧ ಟಾಲಿವುಡ್​ ಮಾಸ್​ ಮಹಾರಾಜ್​ ಖ್ಯಾತಿಯ ನಟ ರವಿತೇಜ ಇಂದು ಇಡಿ ವಿಚಾರಣೆಗೆ ಹಾಜರಾಗಿದ್ದಾರೆ. ಇವರ ಜೊತೆ ಸಹಾಯಕ ಮತ್ತು ಕಾರು ಚಾಲಕ ಶ್ರೀನಿವಾಸ್ ಇಡಿ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.

ಇದಕ್ಕೂ ಮೊದಲು ರವಿತೇಜ ಅವರಿಗೆ ಇಡಿ ಅಕ್ರಮ ಹಣ ವರ್ಗಾವಣೆ ಹಾಗೂ ಡ್ರಗ್ಸ್​​​ ಕೇಸ್ ಸಂಬಂಧ ನೋಟಿಸ್ ನೀಡಿತ್ತು. 2017ರಲ್ಲಿ ದಾಖಲಾದ ಈ ಪ್ರಕರಣ ಸಂಬಂಧ ಈಗಾಗಲೇ ಹಲವರ ವಿಚಾರಣೆ ನಡೆಸಿರುವ ಇಡಿ, ನಟ ರವಿತೇಜಾ ಸೇರಿದಂತೆ ಒಟ್ಟು 12 ಮಂದಿಗೆ ನೋಟಿಸ್ ನೀಡಿತ್ತು.

ಇಡಿ ವಿಚಾರಣೆಗೆ ಹಾಜರಾದ ತೆಲುಗು ನಟ ರವಿತೇಜ

ಡ್ರಗ್ಸ್​ ಸರಬರಾಜು ಮಾಡಿರುವ ಆರೋಪ ಎದುರಿಸುತ್ತಿರುವ ಕೆವಿನ್​ ಸಹ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ಈವರೆಗೆ ಇಡಿ ಇಲಾಖೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್​, ನಟಿಯರಾದ ಚಾರ್ಮಿ, ರಕುಲ್ ಪ್ರೀತ್ ಸಿಂಗ್ ಮತ್ತು ನಟ ರಾಣಾ ದಗ್ಗುಬಾಟಿಯನ್ನು ವಿಚಾರಣೆ ನಡೆಸಿದೆ.

Last Updated : Sep 9, 2021, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.