ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಸ್ಯಾಂಡಲ್ವುಡ್ನ ಕನಸುಗಾರ. ಪ್ರೇಮಲೋಕದ ಮೂಲಕ ಸಾಕಷ್ಟು ಹುಡುಗಿಯರ ಹೃದಯ ಕದ್ದ ಚೋರ ಚಿತ್ ಚೋರ. ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸತನ ನೀಡಿದ ಹಠವಾದಿ. ಸಾವಿರಾರು ಅಭಿಮಾನಿಗಳ ನೆಚ್ಚಿನ ನಟನಾಗಿರುವ ಈ ರಣಧೀರನ ಮಗಳು ಗೀತಾಂಜಲಿ ಮಾತ್ರ ಮತ್ತೊಬ್ಬ ನಟ ಕಟ್ಟಾ ಅಭಿಮಾನಿಯಂತೆ.
ತಮ್ಮ ಮಗಳ ಫೇವರಿಟ್ ಸ್ಟಾರ್ ಯಾರು ಅನ್ನೋದನ್ನು ರಿವೀಲ್ ಮಾಡಿದ್ದಾರೆ ರವಿಮಾಮ. ಅಪ್ಪ ರವಿಚಂದ್ರನ್ ದೊಡ್ಡ ನಟನಾಗಿದ್ದರು ಕೂಡ ಕ್ರೇಜಿಸ್ಟಾರ್ ಪುತ್ರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಚ್ಚುಮೆಚ್ಚಂತೆ. ಶಿವಣ್ಣನ ಡಾನ್ಸ್, ಅವತ್ತಿನ ಹೆರ್ ಸ್ಟೈಲ್, ಕಾಸ್ಟ್ಯೂಮ್ಗಳಿಗೆ ಮಾರು ಹೋಗಿದ್ದರಂತೆ ಗೀತಾಂಜಲಿ. ಮಗಳ ಮದುವೆ ಸಂಭ್ರಮದಲ್ಲಿರುವ ರವಿಚಂದ್ರನ್, ತಮ್ಮ ಮಗಳ ಕುರಿತಾದ ಈ ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ್ರು.
ಇನ್ನು ತಮ್ಮ ಮಗಳ ಮದುವೆ ಅದ್ಭುತವಾಗಿ ಮಾಡುತ್ತೇನೆ ಎನ್ನುವ ಅವರು, ಗಾಜಿನ ವೇದಿಕೆ ಹಾಕಿಸುತ್ತಿದ್ದೇನೆ. 25 ದಿನಗಳ ಕಾಲ ಇದರ ಅಲಂಕಾರ ಮಾಡಲಾಗಿದೆ. ಕರಕುಶಲ ವಸ್ತುಗಳ ಮೂಲಕ ಶೃಂಗರಿಸಲಾಗುತ್ತದೆ. ವೇದಿಕೆ ನೋಡಿದರೇನೆ ಎಲ್ಲಾ ಒಂದು ಕ್ಷಣ ಕೂತು ಬೀಡುತ್ತಾರೆ ಎಂದಿದ್ದಾರೆ. ಮದುವೆ ಸಮಾರಂಭದಲ್ಲಿ ನನ್ನ ಮಗಳು ಸೆಲಬ್ರಿಟಿ ಆಗಿರಬೇಕು ಎಂಬ ಆಸೆ ಇದೆ. ನಾನು ಕೇವಲ ತಂದೆಯಾಗಿದ್ದಾರೆ ಸಾಕು ಅಂತಾ ರವಿಚಂದ್ರನ್ ಎಮೋಷನ್ ಆಗಿ ಮಾತನಾಡಿದ್ದಾರೆ.