'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ವರ್ಕ್‍ಶಾಪ್‍ನಲ್ಲಿ ತೊಡಗಿಸಿಕೊಂಡಿರುವ ನಟ ರಕ್ಷಿತ್ ಶೆಟ್ಟಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ ರಕ್ಷಿತ್ ಸದ್ದಿಲ್ಲದೆ ಚಿತ್ರವೊಂದನ್ನು ಮುಗಿಸಿದ್ದಾರೆ.
-
Unveiling a pleasant surprise. Presenting the first look poster of @ParamvahStudios' next project #SakutumbaSametha directed by Rahul PK. Pour in your love & good wishes 🤗
— Rakshit Shetty (@rakshitshetty) April 4, 2021 " class="align-text-top noRightClick twitterSection" data="
ನಮ್ಮ ಪರಂವಃ ಸ್ಟುಡಿಯೋಸ್ ನಿರ್ಮಾಣದ ಮುಂದಿನ ಚಿತ್ರ 'ಸಕುಟುಂಬ ಸಮೇತ'. ಎಂದಿನಂತೆ ನಿಮ್ಮ ಪ್ರೀತಿ, ಹಾರೈಕೆ ನಮ್ಮ ಜೊತೆಗಿರಲಿ✨ pic.twitter.com/2Y1lzH1Umq
">Unveiling a pleasant surprise. Presenting the first look poster of @ParamvahStudios' next project #SakutumbaSametha directed by Rahul PK. Pour in your love & good wishes 🤗
— Rakshit Shetty (@rakshitshetty) April 4, 2021
ನಮ್ಮ ಪರಂವಃ ಸ್ಟುಡಿಯೋಸ್ ನಿರ್ಮಾಣದ ಮುಂದಿನ ಚಿತ್ರ 'ಸಕುಟುಂಬ ಸಮೇತ'. ಎಂದಿನಂತೆ ನಿಮ್ಮ ಪ್ರೀತಿ, ಹಾರೈಕೆ ನಮ್ಮ ಜೊತೆಗಿರಲಿ✨ pic.twitter.com/2Y1lzH1UmqUnveiling a pleasant surprise. Presenting the first look poster of @ParamvahStudios' next project #SakutumbaSametha directed by Rahul PK. Pour in your love & good wishes 🤗
— Rakshit Shetty (@rakshitshetty) April 4, 2021
ನಮ್ಮ ಪರಂವಃ ಸ್ಟುಡಿಯೋಸ್ ನಿರ್ಮಾಣದ ಮುಂದಿನ ಚಿತ್ರ 'ಸಕುಟುಂಬ ಸಮೇತ'. ಎಂದಿನಂತೆ ನಿಮ್ಮ ಪ್ರೀತಿ, ಹಾರೈಕೆ ನಮ್ಮ ಜೊತೆಗಿರಲಿ✨ pic.twitter.com/2Y1lzH1Umq
ರಕ್ಷಿತ್ ತಮ್ಮ ಪರಮ್ವಾ ಸ್ಟುಡಿಯೋಸ್ ಸಂಸ್ಥೆಯಿಂದ 'ಸಕುಟುಂಬ ಸಮೇತ' ಎಂಬ ಚಿತ್ರವನ್ನು ನಿರ್ಮಿಸಿದ್ದು, ಇದರ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ. ಭಾನುವಾರ ರಾತ್ರಿ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಕ್ಷಿತ್ ತಂಡದಲ್ಲಿ ಗುರುತಿಸಿಕೊಂಡಿರುವ ರಾಹುಲ್ ಎನ್ನುವವರು ನಿರ್ದೇಶನ ಮಾಡಿದ್ದಾರೆ.
ರಾಹುಲ್ ಇದಕ್ಕೂ ಮುನ್ನ ರಕ್ಷಿತ್ ಅಭಿನಯದ ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸ್ವತಂತ್ರವಾಗಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಭರತ್ ಮತ್ತು ಸಿರಿ ರವಿಕುಮಾರ್ ಎಂಬ ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದ್ದು, ಮಿಕ್ಕಂತೆ ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಜಯಲಕ್ಷ್ಮೀ ಪಾಟೀಲ್, ಪುಷ್ಪಾ ಬೆಳವಾಡಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಫೆಬ್ರವರಿಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿ ಸದ್ದಿಲ್ಲದೆ ಮುಗಿದಿದೆ. ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಬೇಕೋ ಅಥವಾ ಚಿತ್ರಮಂದಿರಗಳಲ್ಲೇ ತೆರೆಕಾಣಿಸಬೇಕೋ ಎಂಬ ಗೊಂದಲದಲ್ಲಿ ಚಿತ್ರತಂಡ ಇದ್ದು, ಸದ್ಯದಲ್ಲೇ ಈ ವಿಷಯವಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದಂತೆ. ಈ ಚಿತ್ರಕ್ಕೆ ಕರಂ ಚಾವ್ಲಾ ಮತ್ತು ಸಂದೀಪ್ ವಲ್ಲೂರಿ ಛಾಯಾಗ್ರಹಣ ಮಾಡಿದ್ದು, ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ.