ETV Bharat / sitara

‘ಕಿರಿಕ್’ ಬದಿಗೊತ್ತಿ ಒಂದಾದ ರಕ್ಷಿತ್ ಶೆಟ್ಟಿ-ಲಹರಿ ವೇಲು ಜೋಡಿ

ಕಿರಿಕ್ ಪಾರ್ಟಿ ಚಿತ್ರ ಬಿಡುಗಡೆಯಾದ ಬಳಿಕ ಅದರಲ್ಲಿದ್ದ ಹಾಡೊಂಡು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಲಹರಿ ಸಂಸ್ಥೆಯ ಹಳೆಯ ಹಾಡಿನ ಸಂಗೀತ ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ಲಹರಿ ಸಂಸ್ಥೆ ಆರೋಪಿಸಿತ್ತು. ಅಲ್ಲದೆ ಕೋರ್ಟ್​ ಮೆಟ್ಟಿಲೇರಿ ಕಾನೂನು ಸಮರ ಕೈಗೊಂಡಿತ್ತು. ಆದರೆ ಈಗ ಕಿರಿಕ್ ಪಾರ್ಟಿ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಮತ್ತು ಲಹರಿ ಸಂಸ್ಥೆ ಮಾಲೀಕ ವೇಲು ಇದೆಲ್ಲವನ್ನು ಮರೆತು ಮತ್ತೆ ಒಂದಾಗಿದ್ದಾರೆ.

ರಕ್ಷಿತ್ ಶೆಟ್ಟಿ-ಲಹರಿ ವೇಲು
ರಕ್ಷಿತ್ ಶೆಟ್ಟಿ-ಲಹರಿ ವೇಲು
author img

By

Published : Jun 29, 2021, 4:44 PM IST

ಸ್ಯಾಂಡಲ್​​ವುಡ್​​ ನಟ ರಕ್ಷಿತ್​ ಶೆಟ್ಟಿ ಮತ್ತು ಲಹರಿ ಮ್ಯೂಸಿಕ್​ ಸಂಸ್ಥೆ ಮಾಲೀಕ ವೇಲು ನಡುವೆ ಚಿತ್ರದ ಹಾಡಿನ ವಿಚಾರವಾಗಿ ಈ ಮೊದಲು ಮನಸ್ತಾಪ ಉಂಟಾಗಿತ್ತು. ಇದೀಗ ಮುನಿಸು ಮರೆತು ಈ ಇಬ್ಬರು ಒಂದಾಗಿದ್ದಾರೆ.

ಕಿರಿಕ್​ ಪಾರ್ಟಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದ್ದ ಹಾಡು ಲಹರಿ ಸಂಸ್ಥೆಯದ್ದು ಎಂದು ಕೃತಿಚೌರ್ಯದ ಆರೋಪ ಹೊರಿಸಿ ವೇಲು ಕೋರ್ಟ್ ಮೆಚ್ಚಿಲೇರಿದ್ದರು. ಬಳಿಕ ಈ ಪ್ರಕರಣ ಸಂಬಂಧ ಹಲವು ಬಾರಿ ವಿಚಾರಣೆ ಸಹ ನಡೆದಿತ್ತು. ಲಹರಿ ವೇಲು ಮತ್ತು ರಕ್ಷಿತ್​ ಶೆಟ್ಟಿ ಸಾರ್ವಜನಿಕವಾಗಿಯೇ ಆರೋಪ ಮತ್ತು ಪ್ರತ್ಯಾರೋಪ ಮಾಡಿದ್ದರು. ಆದರೆ ಈಗ ಅಚ್ಚರಿ ಎಂಬಂತೆ ಇಬ್ಬರೂ ಒಂದಾಗಿದ್ದಾರೆ. ರಕ್ಷಿತ್​ ಶೆಟ್ಟಿ ಹಾಗೂ ಲಹರಿ ಸಂಸ್ಥೆ ಮಾಲೀಕ ಲಹರಿ ವೇಲು, ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಮುನಿಸು ಮರೆತಿದ್ದಾರೆ.

ತಮ್ಮ ನಡುವಿನ ಎಲ್ಲ ಕಿರಿಕ್​ಗಳನ್ನು ಬದಿಗಿಟ್ಟು ಸ್ನೇಹದ ಹಸ್ತ ಚಾಚಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ಮೂವರು ಹೊಸ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲ, ಈ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಘಟನೆ, ಹಲವು ದೃಷ್ಟಿಕೋನಗಳು. ದೃಷ್ಟಿಕೋನಗಳನ್ನು ಹಂಚಿಕೊಂಡು, ಅರ್ಥ ಮಾಡಿಕೊಂಡಾಗ ನಾವು ಮನುಷ್ಯರಾಗಿ ಒಗ್ಗೂಡುತ್ತೇವೆ. ಪ್ರೀತಿ ಮತ್ತು ಪರಸ್ಪರ ಗೌರವಗಳಲ್ಲಿ ಎಲ್ಲವೂ ಸೇರಿಕೊಳ್ಳಲೇಬೇಕು. ಅದೇ ಬೆಳವಣಿಗೆಯ ನಿಜವಾದ ಲಕ್ಷಣ’ ಎಂದು ರಕ್ಷಿತ್​ ಶೆಟ್ಟಿ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಬರೆದುಕೊಂಡಿದ್ದಾರೆ.

  • One incident... many perspectives... and when the perspectives are shared and understood, we stand united as humans. Everything must meet at a juncture of love and mutual respect... for that’s the only true nature of growth. Within and without 😊 pic.twitter.com/1gBK5nUmW9

    — Rakshit Shetty (@rakshitshetty) June 29, 2021 " class="align-text-top noRightClick twitterSection" data=" ">

ತಮ್ಮ ನಡುವಿನ ಕಿರಿಕ್​ ಮರೆತು ಒಂದಾಗಿರುವ ಈ ಸೆಲೆಬ್ರಿಟಿಗಳನ್ನು ಕಂಡು ಸ್ಯಾಂಡಲ್​ವುಡ್​ ಮಂದಿ ಖುಷಿಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟಿನ ಕೊರತೆ ಇದೆ ಎಂಬ ಮಾತು ಆಗಾಗ್ಗೆ ಕೇಳಿಬರುತ್ತದೆ. ಅದರ ಜೊತೆಗೆ ಇಲ್ಲಸಲ್ಲದ ವಿವಾದಗಳು ಹುಟ್ಟಿಕೊಂಡಾಗ ಚಿತ್ರರಂಗದ ಒಗ್ಗಟ್ಟಿಗೆ ಹೆಚ್ಚು ಧಕ್ಕೆ ಆಗುತ್ತದೆ.

ಇಂಥದ್ದರ ನಡುವೆ ರಕ್ಷಿತ್​ ಶೆಟ್ಟಿ, ಲಹರಿ ವೇಲು ಅವರು ಕೋರ್ಟ್​ ಕೇಸ್​ಗಳನ್ನು ಬದಿಗಿಟ್ಟು ಮತ್ತೆ ಸ್ನೇಹಿತರಾಗಿರುವುದು ಒಳ್ಳೆಯ ಬೆಳವಣಿಗೆ. ಹಾಗೇ ದಕ್ಷಿಣ ಭಾರತದಲ್ಲಿನ ಪ್ರಮುಖ ಆಡಿಯೋ ಸಂಸ್ಥೆಗಳಲ್ಲಿ ಲಹರಿ ಮ್ಯೂಸಿಕ್​ ಕೂಡ ಪ್ರಮುಖವಾದದ್ದು. ಸಾವಿರಾರು ಸೂಪರ್​ ಹಿಟ್​ ಹಾಡುಗಳನ್ನು ಈ ಸಂಸ್ಥೆ ನೀಡಿದೆ.

ಓದಿ: ಮುದ್ದಾದ ಮಗುವಿಗೆ ಜನ್ಮ ನೀಡಿದ ಬಿಗ್​ಬಾಸ್​ ಸ್ಪರ್ಧಿ ನಯನಾ‌ ಪುಟ್ಟಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.