ಕೊರೊನಾ ಕೇಸ್ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರೊಂದಿಗೆ ಕನ್ನಡ ಸಿನಿಮಾ ರಂಗದಲ್ಲಿಯೂ ಸವಾಲುಗಳು ಹೆಚ್ಚಾಗುತ್ತಿವೆ. ಕಿರುತೆರೆ ಕಲಾವಿದರು ಹಾಗೂ ಸಿಬ್ಬಂದಿಗೂ ಕೊರೊನಾದಿಂದ ಸಂಕಷ್ಟಗಳು ಎದುರಾಗಿದ್ದು ಇದರ ಕುರಿತು ಅಗ್ನಿಸಾಕ್ಷಿ ಅಖಿಲ್ ಪಾತ್ರಧಾರಿ ರಾಜೇಶ್ ಧ್ರುವ ಮಾತನಾಡಿದ್ದಾರೆ.
"ಲಾಕ್ಡೌನ್ನಿಂದಾಗಿ ತುಂಬಾ ಕಷ್ಟವಾಗುತ್ತಿದೆ. ತುಂಬಾ ಧಾರಾವಾಹಿಗಳು ಈಗಾಗಲೇ ವಿಭಿನ್ನ ಲೊಕೇಶನ್ಗಳಿಗೆ ಕನಿಷ್ಠ ತಂಡದೊಂದಿಗೆ ಶಿಫ್ಟ್ ಆಗಿವೆ. ನಿರ್ಮಾಪಕರು ರೆಸಾರ್ಟ್ಗಳನ್ನು ಬುಕ್ ಮಾಡಿ ಶೂಟಿಂಗ್ ಮಾಡುತ್ತಿದ್ದಾರೆ. ಅವರಿನ್ನೂ ಕೆಲಸ ಕಳೆದುಕೊಂಡಿಲ್ಲ. ಇದು ಪ್ರಶಂಸೆಯ ವಿಚಾರವಾಗಿದೆ." ಎಂದಿದ್ದಾರೆ.
"ನಾವು ಕಲಾವಿದರು ದಿನ ಸಂಬಳಕ್ಕೆ ಕೆಲಸ ಮಾಡುವವರು. ನಮಗೆ ಒಂದು ದಿನ ನಷ್ಟ ಆದರೂ ಅದನ್ನು ಪಡೆಯುವುದು ಕಷ್ಟ. ಅದನ್ನು ಯಾರೂ ಈಡೇರಿಸಲಾರರು. ಕಲಾವಿದರ ಹೊಟ್ಟೆಪಾಡು ತಲೆಕೆಳಗಾಗಿ ಬಿಡುತ್ತದೆ. ಕೇವಲ ಕಲಾವಿದರು ಮಾತ್ರವಲ್ಲದೇ ಸಿಬ್ಬಂದಿ ವರ್ಗ ಕೂಡ ಇದೇ ಕಷ್ಟ ಅನುಭವಿಸುತ್ತಿದ್ದಾರೆ. ಸುಮಾರು 300 ಜನ ಈಗ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದಾರೆ. ಅವರಿನ್ನೂ ಕಳೆದ ವರ್ಷದ ಲಾಕ್ಡೌನ್ನಿಂದಲೇ ಚೇತರಿಸಿಕೊಂಡಿಲ್ಲ" ಎಂದಿದ್ದಾರೆ ರಾಜೇಶ್ ಧ್ರುವ.
ಇನ್ನು ಇದರ ಹೊರತಾಗಿ ಹಲವು ಸಿನಿಮಾ ಕಲಾವಿದರು ಕಿರುತೆರೆಯಲ್ಲಿಯೂ ನಟಿಸುತ್ತಿದ್ದಾರೆ. ಚಿತ್ರೋದ್ಯಮವೂ ಇದೇ ಪರಿಸ್ಥಿತಿ ಎದುರಿಸುತ್ತಿದೆ ಅಥವಾ ಇಂಡಸ್ಟ್ರಿಯಲ್ಲಿ ಅವಕಾಶಗಳು ಕಮ್ಮಿಯಾಗಿರಬಹುದು. ಟಿವಿಯಲ್ಲಿ ಅದೃಷ್ಟವನ್ನು ನೋಡಲು ಪ್ರಯತ್ನಿಸುತ್ತಿರಬಹುದು. ಸಿನಿಮಾ ಕಲಾವಿದರು ಟಿವಿ ಶೋ ಗೆ ಲುಕ್ ಟೆಸ್ಟ್ ಮಾಡಿಸುತ್ತಿರುವುದನ್ನು ನೋಡಿ ಶಾಕ್ ಆದೆ. ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಹೀಗಾಗಿ ಜನರು ಬದುಕಲು ಯಾವ ಕೆಲಸವನ್ನೂ ಮಾಡುತ್ತಾರೆ ಎಂಬುದು ನನ್ನ ಭಾವನೆ. ಇಂಡಸ್ಟ್ರಿಯಲ್ಲಿಯೂ ತುಂಬಾ ಸ್ಪರ್ಧೆ ಇದೆ ಎಂದು ರಾಜೇಶ್ ಧ್ರುವ ಹೇಳಿದ್ದು, ಕಲಾವಿದರು ಬಂದು ಹೋಗುತ್ತಾರೆ, ಅವಕಾಶಗಳೂ ಬಂದು ಹೋಗುತ್ತವೆ. ಆದರೆ ಉತ್ತಮವಾದುದನ್ನು ಆರಿಸುವುದು ನಮ್ಮ ನಿರ್ಧಾರ. ನಿರ್ಮಾಪಕರಿಗೆ ಪಾತ್ರಕ್ಕೆ ಉತ್ತಮ ಕಲಾವಿದರನ್ನು ಆರಿಸಲು ಹಲವು ದಾರಿಗಳಿವೆ. ಕಲಾವಿದರಿಗೆ ಈ ಆಯ್ಕೆ ಇಲ್ಲ ಎಂದು ಮನದ ಮಾತುಗಳನ್ನು ಹೇಳಿದ್ದಾರೆ.