ETV Bharat / sitara

’’ಸ್ವಲ್ಪ ಮಿಸ್​ ಆಗ್ಬಿಟ್ಟಿದೆ, ಫಸ್ಟ್​ ನಾನು ಹೋಗ್ಬೇಕಿತ್ತು.. ಆದರೆ ಅವನು ಹೋಗ್ಬಿಟ್ಟ‘‘: ತಮ್ಮನ ಅಗಲಿಕೆಗೆ ಅಣ್ಣನ ಭಾವುಕ ನುಡಿ

ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತವಾಗಿದೆ. ತಮ್ಮನ ನಿಧನದಿಂದ ದುಃಖಿತರಾದ ನಟ ರಾಘವೇಂದ್ರ ರಾಜ್​ಕುಮಾರ್ ಮಾತನಾಡಿ, ಸ್ವಲ್ಪ ಮಿಸ್​ ಆಗ್ಬಿಟ್ಟಿದೆ. ಫಸ್ಟ್​ ನಾನು ಹೋಗ್ಬೇಕಿತ್ತು. ಆದರೆ ಅವನು ಹೋಗ್ಬಿಟ್ಟ ಎಂದು ಹೇಳಿದರು.

ತಮ್ಮನ ಅಗಲಿಕೆಗೆ ಅಣ್ಣನ ಭಾವುಕ ನುಡಿ
ತಮ್ಮನ ಅಗಲಿಕೆಗೆ ಅಣ್ಣನ ಭಾವುಕ ನುಡಿ
author img

By

Published : Oct 29, 2021, 7:17 PM IST

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ನಿಧನದಿಂದ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ತೀವ್ರ ಆಘಾತವಾಗಿದೆ. ಕನ್ನಡದ ಮೇರು ನಟ ಡಾ.ರಾಜ್​ಕುಮಾರ್​ ಅವರ ಐವರು ಮಕ್ಕಳಲ್ಲಿ ಅಪ್ಪು ಕಿರಿಯವರು. ಮನೆಯ ಕಿರಿಯ ಕುಡಿ ಕಳೆದುಕೊಂಡು ಎಲ್ಲರೂ ಕಣ್ಣೀರಾಗಿದ್ದಾರೆ.

ತಮ್ಮನ ನಿಧನದಿಂದ ದುಃಖಿತರಾದ ನಟ ರಾಘವೇಂದ್ರ ರಾಜ್​ಕುಮಾರ್ ಮಾತನಾಡಿ, ಸ್ವಲ್ಪ ಮಿಸ್​ ಆಗ್ಬಿಟ್ಟಿದೆ. ಫಸ್ಟ್​ ನಾನು ಹೋಗ್ಬೇಕಿತ್ತು. ಆದರೆ, ಅವನು ಹೋಗ್ಬಿಟ್ಟ ಎಂದು ಹೇಳಿದರು.

ತಮ್ಮನ ಅಗಲಿಕೆಗೆ ಅಣ್ಣನ ಭಾವುಕ ನುಡಿ

ನಾನು ಎರಡು ಸಲ ಆಸ್ಪತ್ರೆಗೆ ಸೇರಿದಾಗ ಸುರಕ್ಷಿತವಾಗಿ ವಾಪಸ್ ಕರೆ ತಂದರು. ಆದರೆ, ನನ್ನಿಂದ ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪ್ಪ, ಅಮ್ಮನನ್ನು ನೋಡಲು ಬಹಳ ಬೇಗ ತೆರಳಿದ್ದಾನೆ ಎಂದು ಗದ್ಗದಿತರಾದರು.

ಕಲಾವಿದರಿಗೆ ಎಂದಿಗೂ ಸಾವಿಲ್ಲ. ಅವನು ಕೇವಲ ಗಂಭೀರವಾಗಿ ಮಲಗಿಕೊಂಡಿದ್ದಾನೆ ಅಷ್ಟೇ. ಇನ್ನುಳಿದಿರುವುದು ಅವನನ್ನು ಶಾಂತಿಯುತವಾಗಿ, ವಿಜೃಂಭಣೆಯಿಂದ ಕಳುಹಿಸಿಕೊಡುವುದು. ಈ ಕಾರ್ಯಕ್ಕೆ ಅಭಿಮಾನಿಗಳೆಲ್ಲ ಸಹಕರಿಸಬೇಕು. ತಂದೆಯವರ ಅಗಲಿಕೆಯ ವೇಳೆ ಆದಂತೆ ಆಗಬಾರದು ಎಂದು ಮನವಿ ಮಾಡಿದರು.

ಓದಿ: 'ಯುವರತ್ನ' ಸ್ಪೇನ್ ಚಿತ್ರೀಕರಣ ಕ್ಯಾನ್ಸಲ್ ಆಗಲು ಪುನೀತ್​​ಗೆ ಇದ್ದ ಆ ಅಭ್ಯಾಸವೇ ಕಾರಣವಂತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.