ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಚಿತ್ರದುರ್ಗದಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ. ಇದೇ 18 ರಂದು ಕೆಂಪೇಗೌಡ ಕಟ್ಟಿದ ನಾಡಲ್ಲಿ ಪೈಲ್ವಾನ್ ಧ್ವನಿ ಸುರಳಿ ಅನಾವರಣಗೊಳ್ಳಲಿದೆ.
ಈ ಮೊದಲು ಇದೇ 9 ವರಮಹಾಲಕ್ಷ್ಮೀ ಹಬ್ಬದಂದು ಕೋಟೆನಾಡು ಚಿತ್ರದುರ್ಗದಲ್ಲಿ ಪೈಲ್ವಾನ್ ಆಡಿಯೋ ರಿಲೀಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಭೀಕರ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾದ ಹಿನ್ನೆಲೆ ಕಾರ್ಯಕ್ರಮ ರದ್ದುಗೊಳಿಸಿದ್ದರು ಸುದೀಪ್. ಇದೀಗ ಹೊಸ ದಿನಾಂಕ ಪ್ರಕಟಿಸಿಸಲಾಗಿದೆ.
ಇದೇ 18 ಭಾನುವಾರ ಬೆಂಗಳೂರಿನ ಕೋರಮಂಗಲದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಪೈಲ್ವಾನ್ ಗಾನಬಜಾನಾ ಹೊರಬರಲಿದೆ.
ಬಾಲ್ಯಸ್ನೇಹಿತನಿಂದ ಆಡಿಯೋ ಲಾಂಚ್ :
-
As many times audio launch dates were shuffled under circumstances,,, u too have altered ur schedule to ensure ur presence,,, thanks my friend @PuneethRajkumar 🤗✨#pailwaanAudio https://t.co/UIoqCh2rF9
— Kichcha Sudeepa (@KicchaSudeep) August 15, 2019 " class="align-text-top noRightClick twitterSection" data="
">As many times audio launch dates were shuffled under circumstances,,, u too have altered ur schedule to ensure ur presence,,, thanks my friend @PuneethRajkumar 🤗✨#pailwaanAudio https://t.co/UIoqCh2rF9
— Kichcha Sudeepa (@KicchaSudeep) August 15, 2019As many times audio launch dates were shuffled under circumstances,,, u too have altered ur schedule to ensure ur presence,,, thanks my friend @PuneethRajkumar 🤗✨#pailwaanAudio https://t.co/UIoqCh2rF9
— Kichcha Sudeepa (@KicchaSudeep) August 15, 2019
ಮತ್ತೊಂದು ವಿಶೇಷ ಅಂದ್ರೆ ಪೈಲ್ವಾನ್ ಚಿತ್ರದ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ. ಸುದೀಪ್ ಹಾಗೂ ಪುನೀತ್ ಬಾಲ್ಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತು. ಪೈಲ್ವಾನ್ ಹಾಡುಗಳ ರಿಲೀಸ್ ಕಾರ್ಯಕ್ರಮ ಕಾರಣಾಂತರಗಳಿಂದ ಸಾಕಷ್ಟು ಬಾರಿ ಮುಂದೂಡಲ್ಪಟ್ಟಿದೆ. ಇದಕ್ಕೆ ಸಹಕರಿಸಿ ಕಾರ್ಯಕ್ರಮಕ್ಕೆ ಬರುತ್ತಿರುವ ಅಪ್ಪು ಅವರಿಗೆ ಕಿಚ್ಚ ಧನ್ಯವಾದ ಹೇಳಿದ್ದಾರೆ.