ETV Bharat / sitara

ಎಸ್​​​​​​ಪಿಬಿ ಆದಷ್ಟು ಬೇಗ ಗುಣಮುಖರಾಗಿ ಬರಲಿ: ಪುನೀತ್ ಹಾರೈಕೆ - Sandalwood news

ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಕ ಎಸ್​​​​ಪಿಬಿ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಅಂತಾರಾಷ್ಟ್ರೀಯ ವೈದ್ಯರ ತಂಡ ಚಿಕಿತ್ಸೆಗೆ ಆಗಮಿಸಿದೆ. ಎಸ್​​​ಪಿಬಿ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ನಟ ಪುನೀತ್ ರಾಜ್​​​ಕುಮಾರ್​​ ಹಾರೈಸಿದ್ದು, ಅವರೊಂದಿಗಿನ ನೆನಪನ್ನು ಮೆಲುಕು ಹಾಕಿದ್ದಾರೆ.

Puneet Raj Kumar wishes SPB Speedy recovery
ಎಸ್​​​​​​ಪಿಬಿ ಆದಷ್ಟು ಬೇಗ ಗುಣಮುಖರಾಗಿ ಬರಲಿ: ಪುನೀತ್ ರಾಜ್​​​ಕುಮಾರ್ ಹಾರೈಕೆ
author img

By

Published : Aug 21, 2020, 1:04 PM IST

ಬೆಂಗಳೂರು: ಎಸ್​​​​.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ನಾವು ಯಾವತ್ತೂ ಮರೆಯೋಕೆ ಆಗಲ್ಲ. ಅವರ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ನಟ ಪುನೀತ್ ರಾಜ್​​​ಕುಮಾರ್​ ಹಾರೈಸಿದ್ದಾರೆ.

ಆ ದಿನಗಳು ಖ್ಯಾತಿಯ ನಟ ಚೇತನ್ ಅಭಿನಯದ ‘ಮಾರ್ಗ’ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್​, ಸ್ವರ ಮಾಂತ್ರಿಕ ಎಸ್​​​​.ಪಿ.ಬಾಲಸುಬ್ರಹ್ಮಣ್ಯಂ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

ಪುನೀತ್ ರಾಜ್​​​ಕುಮಾರ್

ನನ್ನ ಭಾಗ್ಯಕ್ಕೆ ನಾನು ಒಂದು ಹಾಡಿನಲ್ಲಿ ನಟಿಸಿದ್ದ ‘ಮಾಯಾ ಬಜಾರ್’ ಚಿತ್ರದಲ್ಲಿ ಅವರು ಹಾಡಿದ್ದರು. ಅಲ್ಲದೆ ಬೆಟ್ಟದ ಹೂ ಚಿತ್ರದಲ್ಲಿ ಒಂದು ಹಾಡನ್ನು ಇಬ್ಬರೂ ಹಾಡಿದ್ದೇವೆ. ಇದಲ್ಲದೆ ಫೋನ್​​ನಲ್ಲಿ ಹಲವಾರು ಬಾರಿ ಮಾತನಾಡಿದ್ದೇವೆ. ನಾನು ನಾಯಕನಾಗಿ ಅಭಿನಯಿಸುವ ಚಿತ್ರದಲ್ಲಿ ಅವರಿಂದ ಹಾಡಿಸಲು ನನಗೆ ತುಂಬಾ ಇಷ್ಟ ಇತ್ತು ಎಂದು ಪುನೀತ್ ರಾಜ್​​ಕುಮಾರ್ ಹೇಳಿದರು. ಜೊತೆಗೆ ಆದಷ್ಟು ಬೇಗ ಅವರು ಗುಣಮುಖರಾಗಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.