ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿಕ್ಕ ವಯಸ್ಸಿನಲ್ಲೆ ನಟನೆ ಆರಂಭಿಸಿ ಪ್ರಶಸ್ತಿ ಗಳಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಆದರೆ, ಅವರ ದಿಢೀರ್ ನಿರ್ಗಮನ ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿದೆ.
ಆರು ವರ್ಷವಿರುವಾಗಲೇ ಪ್ರೇಮದ ಕಾಣಿಕೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. 1976ರಲ್ಲಿ ಆರತಿ, ಭಾರತಿ, ಜಯಂತಿ ಸೇರಿದಂತೆ ಅನೇಕ ನಟ-ನಟಿಯರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಂತರ ಒಂದು ವರ್ಷದ ಮಗುವಿದ್ದಾಗ ಸನಾದಿ ಅಪ್ಪಣ್ಣ, ಎರಡನೇ ವರ್ಷಕ್ಕೆ ತಾಯಿಗೆ ತಕ್ಕ ಮಗ ಚಿತ್ರದಲ್ಲಿಯೂ ಕಾಣಿಸಿದ್ದರು. ನಂತರ ಪ್ರಥಮ ಬಾರಿಗೆ ಬಾಲನಟನಾಗಿ ದೊರೈ-ಭಗವಾನ್ ನಿರ್ದೇಶನದಲ್ಲಿ ಬಂದ ವಸಂತ ಗೀತಾ ಸಿನಿಮಾದಲ್ಲಿ ಶ್ಯಾಮ್ ಪಾತ್ರದಲ್ಲಿ ನಟಿಸಿದ್ದರು. ಭಾಗ್ಯವಂತ ಸಿನಿಮಾಕ್ಕೆ ಕಂಠದಾನ ಮಾಡಿದ ಪುನೀತ್ 'ಬಾನ ದಾರಿಯಲ್ಲಿ ಸೂರ್ಯ' ಹಾಡು ಹಾಡಿ ಜನರ ಮೆಚ್ಚುಗೆ ಪಡೆದರು.
ತಂದೆ ರಾಜ್ ಕುಮಾರ್ ಜೊತೆ ಬಾಲ ನಟನಾಗಿ ಪುನೀತ್ ನಟಿಸಿದ ಚಲಿಸುವ ಮೋಡಗಳು ಹಾಗೂ ಹೊಸ ಬೆಳಕು ಸಿನಿಮಾಗಳು ಹಿಟ್ ಆಗಿದ್ದವು. ಚಲಿಸುವ ಮೋಡಗಳು ಸಿನಿಮಾದ ಬಾಲ ನಟನೆಗೆ ಅಪ್ಪು ಕರ್ನಾಟಕ ರಾಜ್ಯ ಫಿಲ್ಮ್ ಅವಾರ್ಡ್ ಬಾಚಿಕೊಂಡರು.
ನಂತರ ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು ಸಿನಿಮಾ ನಟನೆಗೆ ಕರ್ನಾಟಕ ರಾಜ್ಯ ಫಿಲ್ಮ ಅವಾರ್ಡ್- ಅತ್ಯುತ್ತಮ ಬಾಲ ನಟ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದುಕೊಂಡರು.
ರಾಷ್ಟ್ರ ಪ್ರಶಸ್ತಿಗಳು
1985- ಬೆಟ್ಟದ ಹೂವು - ಅತ್ಯುತ್ತಮ ಬಾಲನಟ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
1982- ಚಲಿಸುವ ಮೋಡಗಳು- ಅತ್ಯುತ್ತಮ ಬಾಲನಟ
1983- ಎರಡು ನಕ್ಷತ್ರಗಳು- ಅತ್ಯುತ್ತಮ ಬಾಲನಟ
2007- ಮಿಲನ - ಅತ್ಯುತ್ತಮ ನಟ
2010 - ಜಾಕಿ - ಅತ್ಯುತ್ತಮ ನಟ
ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿಗಳು
2008- ಮಿಲನ
2008- ವಂಶಿ
2009- ರಾಜ್
2010- ಜಾಕಿ
2011- ಹುಡುಗರು
2013- ಯಾರೇ ಕೂಗಾಡಲಿ
2013- ಅಣ್ಣಾ ಬಾಂಡ್
2016- ರಣ ವಿಕ್ರಮ
2018- ರಾಜಕುಮಾರ
2007- ಅರಸು
2011- ಹುಡುಗರು
2015- ರಣ ವಿಕ್ರಮ