ಸತೀಶ್, ಜನ್ಮದಿನದ ಉಡುಗೊರೆಯಾಗಿ ಅಭಿಮಾನಿಗಳಿಗೆ 100 ಸಸಿಗಳನ್ನು ನೀಡಿ ಪರಿಸರ ಕಾಳಜಿ ಮೆರೆದರು. ಇದರ ಜತೆಗೆ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಅವರು, ಇಂದು ರಾತ್ರಿ ಹಾಗೂ ನಾಳೆ ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಹೊಟ್ಟೆತುಂಬಾ ಊಟ ಹಾಕಲಿದ್ದಾರೆ. ಈ ಬಗ್ಗೆ ಮಾತಾಡಿರುವ ಸತೀಶ್, ನಾವು ಮನೆಗಳಲ್ಲಿ ಫಾರಿನ್ ಬ್ರೀಡ್ಗಳ ನಾಯಿಗಳನ್ನು ಸಾಕುತ್ತೇವೆ. ಆದರೆ, ಬೀದಿನಾಯಿಗಳು ಹೊಟ್ಟೆಗಿಲ್ಲದೇ ಸಾಯುತ್ತಿವೆ. ಅವುಗಳಿಗೆ ಊಟ ಹಾಕುವ ಕೆಲಸ ಮಾಡುತ್ತೇನೆ ಎಂದರು.
ಸತೀಶ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಅವರು ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಒಂದೂವರೆ ನಿಮಿಷದ ಈ ಟೀಸರ್ ಸಖತ್ ಆಗಿ ಮೂಡಿ ಬಂದಿದೆ.
- " class="align-text-top noRightClick twitterSection" data="">