ETV Bharat / sitara

ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದು ಸಂತಸ ತಂದಿದೆ: ಮೋಹನ್ ಲಾಲ್

ತಾವು ನಟಿಸಿರುವ ಮಲಯಾಳಂನ 'ಮರಕ್ಕರ್: ಅರಬಿಕಡಲಿಂಟೆ ಸಿಂಹಮ್' ಚಿತ್ರಕ್ಕೆ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಬಂದಿದಕ್ಕೆ ನಟ ಮೋಹನ್ ಲಾಲ್ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಕಾಲಿವುಡ್​ನ ಹಿರಿಯ ನಟ ಮೋಹನ್ ಲಾಲ್
ಕಾಲಿವುಡ್​ನ ಹಿರಿಯ ನಟ ಮೋಹನ್ ಲಾಲ್
author img

By

Published : Mar 23, 2021, 7:29 AM IST

ಎರ್ನಾಕುಲಂ( ಕೇರಳ): ಮಲಯಾಳಂನ 'ಮರಕ್ಕರ್: ಅರಬಿಕಡಲಿಂಟೆ ಸಿಂಹಮ್' ಚಿತ್ರಕ್ಕೆ ಅತ್ಯುತ್ತಮ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಬಂದಿದಕ್ಕೆ ಕಾಲಿವುಡ್​ನ ಹಿರಿಯ ನಟ ಮೋಹನ್ ಲಾಲ್ ಸಂತೋಷ ವ್ಯಕ್ತ ಪಡಿಸಿದ್ದಾರೆ.

'ಮರಕ್ಕರ್: ಅರಬಿಕಡಲಿಂಟೆ ಸಿಂಹಮ್' ಚಿತ್ರಕ್ಕೆ ಅತ್ಯುತ್ತಮ ಚಿತ್ರ ಎಂಬ ರಾಷ್ಟ್ರೀಯ ಗರಿ ಸಿಕ್ಕಿದೆ. ಇದು ಸಹಜವಾಗೇ ಖುಷಿ ತಂದಿದೆ. ಈ ಚಿತ್ರದಲ್ಲಿ ನಾನು ನಟಿಸಿದ್ದು ಮತ್ತಷ್ಟು ಖುಷಿ ನೀಡಿದೆ. ಈ ಪ್ರಶಸ್ತಿಯ ಶ್ರೇಯಸ್ಸು ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಸೇರುತ್ತದೆ ಎಂದಿದ್ದಾರೆ. ಈ ಚಿತ್ರದಲ್ಲಿ ಅತ್ಯುತ್ತಮ ಗ್ರಾಫಿಕ್ಸ್​ ಮತ್ತು ಉತ್ತಮವಾದ ಕಾಸ್ಟೂಮ್​ ಡಿಸೈನಿಂಗ್​ ಇದ್ದಿದ್ದು ಚಿತ್ರದ ಗೆಲುವಿಗೆ ಮುಖ್ಯ ಕಾರಣವಾಗಿದೆ. ಈ ಎಲ್ಲದರ ಶ್ರೇಯಸ್ಸು ಚಿತ್ರದ ನಿರ್ಮಾಪಕ ಆಂಟನಿ ಪೆರುಂಬವೂರ್‌ಗೆ ಸಲ್ಲುತ್ತದೆ. ಅಂತಹ ಚಿತ್ರ ಮಾಡುವ ಧೈರ್ಯ ಅವರಿಗೆ ಇದ್ದುದರಿಂದ ಎಲ್ಲವು ಸಾಧ್ಯವಾಯಿತು ಎಂದು ಮೋಹನ್‌ಲಾಲ್ ಗುಣಗಾನ ಮಾಡಿದ್ದಾರೆ.

ಕಾಲಿವುಡ್​ನ ಹಿರಿಯ ನಟ ಮೋಹನ್ ಲಾಲ್

ಚಿತ್ರವು ಒಂದು ವರ್ಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಇದನ್ನು ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಚೈನೀಸ್ ಭಾಷೆಗಳಲ್ಲಿ ಬಿಡುಗಡೆ ಮಾಡಬೇಕಿತ್ತು. ದೇವರ ಆಶೀರ್ವಾದದಿಂದ ಎಲ್ಲವೂ ಸಾಧ್ಯವಾಯಿತು ಎಂದು ಮೋಹನ್ ಲಾಲ್ ಹೇಳಿದರು.

ಓದಿ : 'ಪಿಂಗಾರ' ತುಳು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ

ನಿರ್ಮಾಪಕ ಆಂಟನಿ ಪೆರುಂಬವೂರ್ ಮಾತನಾಡಿ, ಈ ಪ್ರಶಸ್ತಿ ಬಂದಿದ್ದು ತುಂಬಾ ಸಂತೋಷವನ್ನುಂಟು ಮಾಡಿದೆ, ಈ ಗೆಲುವಿನ ಎಲ್ಲಾ ಶ್ರೇಯಸ್ಸು ಮೋಹನ್​ ಲಾಲ್​ಗೆ ಸಲ್ಲುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.