ETV Bharat / sitara

ನೆರೆಹಾವಳಿಗೆ ಸಿಲುಕಿರುವ ಉತ್ತರ ಕರ್ನಾಟಕಕ್ಕೆ ಸುದೀಪ್​ ಸಹಾಯಹಸ್ತ...ಸಂತ್ರಸ್ತರ ನೆರವಿಗೆ ತಂಡ ರವಾನಿಸಿದ ಕಿಚ್ಚ!

author img

By

Published : Aug 8, 2019, 7:28 PM IST

Updated : Aug 8, 2019, 9:39 PM IST

ಈ ಕಾರ್ಯಕ್ರಮ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ನಮ್ಮ ಹುಡುಗರನ್ನು ಕಳುಹಿಸಿದ್ದೇನೆ. ಅಲ್ಲಿಯ ಜನರಿಗೆ ಇಂದು ನಮ್ಮ ಸಹಾಯ ಅಗತ್ಯವಿದೆ. ಕಾರ್ಯಕ್ರಮಕ್ಕೆ ವಹಿಸುವ ಶ್ರಮವನ್ನು ಅಲ್ಲಿಯ ಜನರ ರಕ್ಷಣೆಗೆ ಬಳಸೋಣ' ಎಂದಿದ್ದಾರೆ ಸುದೀಪ್​.

ಪೈಲ್ವಾನ್

ನಾಳೆ ಕೋಟೆ ನಗರಿ ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ಮುಂದೂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆ ಅಭಿನಯ ಚಕ್ರವರ್ತಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

  • I once again request all my frnzz to look into what can be done to support the flood hit areas. I suggest u look into this than putting ur energy into trending my song or my bday. All this can wait. A big thanks to all those frnz who imm reacted n have joined hands. 🤗🙏🏼🙏🏼

    — Kichcha Sudeepa (@KicchaSudeep) August 8, 2019 " class="align-text-top noRightClick twitterSection" data=" ">

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪೈಲ್ವಾನ್ ಹಾಡುಗಳ ಅನಾವರಣಕ್ಕೆ ಚಿತ್ರರಂಗದಲ್ಲಿ ವೇದಿಕೆ ಸಿದ್ಧವಾಗಿತ್ತು. ವರಮಹಾಲಕ್ಷ್ಮಿ ಹಬ್ಬದ ದಿನವಾದ ನಾಳೆ ಅದ್ಧೂರಿಯಾಗಿ ಪೈಲ್ವಾನ್​ ಗಾನಬಜಾನಾ ರಿಲೀಸ್ ಆಗಬೇಕಿತ್ತು. ಆದರೆ, ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭೀಕರ ಮಳೆಯಿಂದ ಉತ್ತರ ಕರ್ನಾಟಕ ಸಂಪೂರ್ಣ ಜಲಾವೃತಗೊಂಡಿದೆ. ಅಲ್ಲಿಯ ಜನರು ಸಂಕಷ್ಟದಲ್ಲಿರುವಾಗ ನಾವು ಸಂಭ್ರಮ ಪಡುವುದು ಸರಿಯಲ್ಲ. ಆದ್ದರಿಂದ ಈ ಕಾರ್ಯಕ್ರಮ ಮುಂದೂಡುತ್ತೇನೆ ಎಂದು ಸುದೀಪ್ ತಿಳಿಸಿದ್ದಾರೆ.

  • I wish to postpone th audio launch of #Pailwaan to another date as I feel supporting th flood hit areas should be the priority. I request all my frnz to forgive me for this decision of mine. I also thank my friend @PuneethRajkumar for his cooperation. Mch thanks my friend,🤗. pic.twitter.com/Shon2SIUMa

ಕಾರ್ಯಕ್ರಮ ಪೋಸ್ಟ್​ಪೋನ್​ ಮಾಡಿದ್ದಕ್ಕಾಗಿ ಸೆಲ್ಪಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಕ್ಷಮೆ ಕೋರಿರುವ ಸುದೀಪ್​, 'ಈ ಕಾರ್ಯಕ್ರಮ ಮಾಡಲು ಮನಸ್ಸು ಒಪ್ಪುತ್ತಿಲ್ಲ. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ನೆರವಿಗೆ ನಮ್ಮ ಹುಡುಗರನ್ನು ಕಳುಹಿಸಿದ್ದೇನೆ. ಅಲ್ಲಿಯ ಜನರಿಗೆ ಇಂದು ನಮ್ಮ ಸಹಾಯ ಅಗತ್ಯವಿದೆ. ಕಾರ್ಯಕ್ರಮಕ್ಕೆ ವಹಿಸುವ ಶ್ರಮವನ್ನು ಅಲ್ಲಿಯ ಜನರ ರಕ್ಷಣೆಗೆ ಬಳಸೋಣ' ಎಂದಿದ್ದಾರೆ.

ಇನ್ನು ನೆರೆಹಾವಳಿಗೆ ಸಿಲುಕಿರುವ ಉತ್ತರ ಕರ್ನಾಟಕಕ್ಕೆ ಸುದೀಪ್ ಸಹಾಯ ಹಸ್ತ ಚಾಚಿದ್ದಾರೆ. ಇಂದು ಮುಂಜಾನೆ ಬೆಂಗಳೂರಿನಿಂದ ತಮ್ಮ ಆಪ್ತರನ್ನು ಮೂಲಭೂತ ಸಾಮಗ್ರಿಗಳೊಂದಿಗೆ ಸಂತ್ರಸ್ತರ ಬಳಿ ಕಳುಹಿಸಿಕೊಟ್ಟಿದ್ದಾರೆ.

Intro:Body:Conclusion:
Last Updated : Aug 8, 2019, 9:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.