ETV Bharat / sitara

ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಸರಿಯಲ್ಲ, ನನಗೆ ನಿಮ್ಮ ಪ್ರೀತಿ ಮಾತ್ರ ಸಾಕು: ಸುದೀಪ್ - ಸುದೀಪ್ ಹುಟ್ಟುಹಬ್ಬಕ್ಕೆ ಕೋಣ ಬಲಿ ಕೊಟ್ಟ ಅಭಿಮಾನಿಗಳು

ಕಿಚ್ಚ ಸುದೀಪ್​ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಬಳ್ಳಾರಿಯಲ್ಲಿ ಕೋಣವನ್ನು ಬಲಿ ನೀಡಿ ಕಟೌಟ್​ಗೆ ರಕ್ತದ ಅಭಿಷೇಕ ಮಾಡಿದ್ದಾರೆ. ಇದಕ್ಕೆ ಸುದೀಪ್​ ಬೇಸರ ವ್ಯಕ್ತಪಡಿಸಿದ್ದಾರೆ.

ಸುದೀಪ್​
Sudeep
author img

By

Published : Sep 2, 2021, 10:33 PM IST

ನಟ, ನಿರ್ದೇಶಕ ಕಿಚ್ಚ ಸುದೀಪ್​​​ ಇಂದು ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕೇವಲ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮಾತ್ರ ಬರ್ತ್‌ಡೇಯಲ್ಲಿ ಭಾಗಿಯಾಗಿದ್ದರು.

ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಕೆಲವು ಜಿಲ್ಲೆಗಳಲ್ಲಿ ಕಿಚ್ಚನ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್​ ಮಾಡಿಸಿ ಹಾಲಿನ ಅಭಿಷೇಕ, ಕೇಕ್​ ಕಟ್ಟಿಂಗ್​ ಸೇರಿದಂತೆ ರಕ್ತದಾನ ಹಾಗೂ ಅನ್ನದಾನ ಮಾಡುವ ಮೂಲಕ ಆಚರಿಸಿದ್ದಾರೆ‌.

ಆದರೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಅಭಿಮಾನಿಗಳು ಹುಚ್ಚಾಟ ಮೆರೆದಿದ್ದು, ಕಿಚ್ಚನ ಕಟೌಟ್​​ಗೆ ಕೋಣವನ್ನು ಬಲಿ ನೀಡಿ ರಕ್ತಾಭಿಷೇಕ ಮಾಡಿ ವಿಕೃತಿ ಮೆರೆದಿದ್ದಾರೆ. ಅಭಿಮಾನಿಗಳ ಈ ರೀತಿಯ ಹುಚ್ಚಾಟಕ್ಕೆ ಸುದೀಪ್ ಬೇಸರ ವ್ಯಕ್ತಪಡಿಸಿದ್ದು, ಅಭಿಮಾನದ ಹೆಸರಲ್ಲಿ ಪ್ರಾಣಿ ಹಿಂಸೆ ಮಾಡುವುದು ಸರಿಯಲ್ಲ. ನನಗೆ ನಿಮ್ಮ ಪ್ರೀತಿ ಮಾತ್ರ ಸಾಕು ಎಂದು ಅಭಿಮಾನಿಗಳಿಗೆ ಸುದೀಪ್ ಬುದ್ಧಿಮಾತು ಹೇಳಿದ್ದಾರೆ.

ಇನ್ನು ಸುದೀಪ್ ಅಭಿಮಾನಿಗಳಿಂದ ಪ್ರಾಣಿ ಹಿಂಸೆ ಆಗಿರುವುದಕ್ಕೆ ಪ್ರಾಣಿ ದಯಾ ಸಂಘದಿಂದ ಆಕ್ಷೇಪ ವ್ಯಕ್ತವಾಗಿದ್ದು, ಸಾರ್ವಜನಿಕ ವಲಯದಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: ಅಭಿಮಾನಿಗಳಿಗೆ ಸೂಪರ್​ ಆಫರ್​ ನೀಡಿದ ಮಾದಕ ತಾರೆ; ಯಾರಾದ್ರೂ ರೆಡಿ ಇದ್ದೀರಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.