ETV Bharat / sitara

ಕೋಮಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ಸುದೀಪ್ ಹೆಸರು... ನಟ ಜಗ್ಗೇಶ್ ಹೇಳಿದ್ದೇನು ? - ಸುದೀಪ್

ಸುದೀಪ್ ನನ್ನ ಒಡಹುಟ್ಟದಿದ್ದರೂ ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು. ಅವರ ಹೆಸರು ಈ ವಿಷಯದಲ್ಲಿ ತಂದವರಿಗೆ ಕ್ಷಮೆಯಿಲ್ಲ ಎಂದಿದ್ದಾರೆ ಜಗ್ಗೇಶ್​.

actor jaggesh tweet
author img

By

Published : Aug 14, 2019, 10:03 AM IST

ನಟ ಕೋಮಲ್ ಮೇಲೆ ನಡೆದಿರುವ ಹಲ್ಲೆ ಪ್ರಕರಣದಲ್ಲಿ ಕಿಚ್ಚ ಸುದೀಪ್ ಅವರ ಹೆಸರು ಎಳೆದು ತರಬೇಡಿ ಎಂದು ನವರಸ ನಾಯಕ ಜಗ್ಗೇಶ್​ ಕೇಳಿಕೊಂಡಿದ್ದಾರೆ.

ನಿನ್ನೆ ಮಲ್ಲೇಶ್ವರಂ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ವಿಜಿ ಎಂಬಾತ ಕೋಮಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆ ಹಿಂದೆ ಯಾರ ಕೈವಾಡ ಇದೆ ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ನಡುವೆ ಕೋಮಲ್ ಮೇಲೆ ಹಲ್ಲೆ ನಡೆಸಿದ್ದು ಸುದೀಪ್ ಅವರ ಅಭಿಮಾನಿ ಎನ್ನುವ ಮಾತೂ ಕೂಡ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ಮಾತಾಡಿರುವ ಜಗ್ಗೇಶ್​, ಸುಖಾಸುಮ್ಮನೆ ಸುದೀಪ್ ಅವರ ಹೆಸರು ಎಳೆಯಬೇಡಿ ಎಂದು ಮನವಿ ಮಾಡಿದ್ದಾರೆ.

actor jaggesh tweet
ಜಗ್ಗೇಶ್ ಟ್ವೀಟ್

ಇಂದು ಮುಂಜಾನೆ ಟ್ವೀಟ್ ಮಾಡಿರುವ ಜಗ್ಗೇಶ್, ಸುದೀಪ್ ನನ್ನ ಒಡಹುಟ್ಟದಿದ್ದರೂ ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿ ಬೆಲೆಕಟ್ಟಲಾಗದ್ದು. ಅವರ ಹೆಸರು ಈ ವಿಷಯದಲ್ಲಿ ತಂದವರಿಗೆ ಕ್ಷಮೆಯಿಲ್ಲ ಎಂದಿದ್ದಾರೆ.

ಇನ್ನು ಘಟನೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಹರಿಹಾಯ್ದಿರುವ ಜಗ್ಗೇಶ್​, ನಿಮಗೆ ಬರೆಯುವ ಆಸೆಯಿದ್ದರೆ ಉತ್ತಮ ಸಾಮಾಜಿಕ ವಿಷಯಗಳ ಬಗ್ಗೆ ಬರೆಯಿರಿ. ಮನಸ್ಸುಗಳನ್ನು ಕೆಡಿಸದಿರಿ ಎಂದು ಖಡಕ್​ ಮಾತು ಹೇಳಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.