ಕುರುಕ್ಷೇತ್ರ ಸಿನಿಮಾ ಸತತ ಎರಡು ವಾರಗಳ ಕಾಲ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇತ್ತ ಗಲ್ಲಾ ಪೆಟ್ಟಿಗೆಯಲ್ಲೂ ನಾಗಾಲೋಟ ಪ್ರಾರಂಭಿಸಿರುವ ಈ ಸಿನಿಮಾ, ನೂರು ಕೋಟಿ ರೂಪಾಯಿ ಬಾಚಿಕೊಂಡು ಖುಷಿಯಿಂದ ಬೀಗುತ್ತಿದೆ.
ಕುರುಕ್ಷೇತ್ರದ ಈ ಗೆಲುವು ಕನ್ನಡ ಸಿನಿರಸಿಕರಿಗೆ ಹೆಮ್ಮೆ ತರಿಸಿದೆ. ದಾಸನ ಅಭಿಮಾನಿಗಳು ಕಾಲರ್ ಎತ್ತಿ ಕುಣಿಯವಂತೆ ಮಾಡಿದೆ. ಈ ಸಂಭ್ರಮಕ್ಕೆ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕೈಜೋಡಿಸಿದ್ದಾರೆ.
-
ನನ್ನ ಆನಂದಕ್ಕೆ ಪಾರವೇ ಇಲ್ಲಾ!
— ನವರಸನಾಯಕ ಜಗ್ಗೇಶ್ (@Jaggesh2) August 26, 2019 " class="align-text-top noRightClick twitterSection" data="
ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ!
ಭಾರಿಸಲಿ ನಮ್ಮ ಹುಡುಗರು
ಕನ್ನಡ ಡಿಂಡಿಮವ!
ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು
ಕನ್ನಡಚಿತ್ರರಂಗ ರಾಯರದಯೆಯಿಂದ
ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ
ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು https://t.co/vPNkQU6EBX
">ನನ್ನ ಆನಂದಕ್ಕೆ ಪಾರವೇ ಇಲ್ಲಾ!
— ನವರಸನಾಯಕ ಜಗ್ಗೇಶ್ (@Jaggesh2) August 26, 2019
ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ!
ಭಾರಿಸಲಿ ನಮ್ಮ ಹುಡುಗರು
ಕನ್ನಡ ಡಿಂಡಿಮವ!
ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು
ಕನ್ನಡಚಿತ್ರರಂಗ ರಾಯರದಯೆಯಿಂದ
ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ
ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು https://t.co/vPNkQU6EBXನನ್ನ ಆನಂದಕ್ಕೆ ಪಾರವೇ ಇಲ್ಲಾ!
— ನವರಸನಾಯಕ ಜಗ್ಗೇಶ್ (@Jaggesh2) August 26, 2019
ಅನ್ಯರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿ ಮನಸಿನಲ್ಲಿ ಒಬ್ಬನೆ ನೋವುನುಂಗಿ ಬದುಕುತ್ತಿದ್ದೆ!
ಭಾರಿಸಲಿ ನಮ್ಮ ಹುಡುಗರು
ಕನ್ನಡ ಡಿಂಡಿಮವ!
ನಮ್ಮ ಹೆಮ್ಮೆಯ ಕನ್ನಡ ಕನ್ನಡಿಗರು
ಕನ್ನಡಚಿತ್ರರಂಗ ರಾಯರದಯೆಯಿಂದ
ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ
ಮೆರೆಸಲಿ ಎಂದು ಆಶಿಸುವೆ..ಶುಭಮಸ್ತು https://t.co/vPNkQU6EBX
ವಿಜಯ ಪತಾಕೆ ಹಾರಿಸುತ್ತಿರುವ ಕುರುಕ್ಷೇತ್ರ ಗೆಲುವನ್ನು ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿರುವ ಜಗ್ಗೇಶ್, ನನ್ನ ಆನಂದಕ್ಕೆ ಪಾರವೇ ಇಲ್ಲ ಎಂದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅನ್ಯ ರಾಜ್ಯದವರ ಆರ್ಭಟ ನೋಡಿ ನೋಡಿ ಸಾಕಾಗಿತ್ತು. ಮನಸಿನಲ್ಲಿ ಒಬ್ಬನೇ ನೋವು ನುಂಗಿ ಬದುಕುತ್ತಿದ್ದೆ. ಸದ್ಯ ಈ ನೋವು ಕುರುಕ್ಷೇತ್ರ ಗೆಲುವು ಮರೆಸಿದೆ. ನಮ್ಮ ಹುಡುಗರು ಕನ್ನಡ ಡಿಂಡಿಮವ ಭಾರಿಸಲಿ. ರಾಯರ ದಯೆಯಿಂದ ಕನ್ನಡಚಿತ್ರರಂಗ ಹೀಗೆ ಕನ್ನಡತನವನ್ನು ರಾಷ್ಟ್ರಮಟ್ಟದಲ್ಲಿ ಮೆರೆಸಲಿ ಎಂದು ಆಶಿಸುವುದಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.