ETV Bharat / sitara

ರೈಲಿನಡಿ ಸಿಲುಕಿದ್ದವನ ಪ್ರಾಣ ಉಳಿಸಿ, ಕುಟುಂಬಕ್ಕೆ ಆಸರೆಯಾದ ಜಗ್ಗೇಶ್​​!

ಕನ್ನಡ ಚಿತ್ರರಂಗದ ಹಾಸ್ಯ ನಟ ಜಗ್ಗೇಶ್​ ಪರೋಪಕಾರಕ್ಕೆ ಹೆಸರಾದವರು. ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ದಾನಕ್ಕೆ ಮೀಸಲಿಟ್ಟವರು. ಬಲಗೈಯಿಂದ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎನ್ನುವ ಮನಸ್ಥಿತಿಯವರು. ಆದರೆ, ಸದ್ಯ ತಾವು ಸಹಾಯ ಮಾಡಿದ ಘಟನೆಯೊಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

author img

By

Published : May 27, 2019, 7:46 PM IST

ಚಿತ್ರಕೃಪೆ : ಇನ್​ಸ್ಟಾಗ್ರಾಂ

ಅದು 2010 ರಲ್ಲಿ ನಡೆದ ಘಟನೆ. ಅಂದಿನ ಸಾರಿಗೆ ಸಚಿವ ಆರ್.ಅಶೋಕ್ ಅವರನ್ನು ಬಿಟ್ಟು ಬರಲು ಬೆಂಗಳೂರು ರೈಲು ನಿಲ್ದಾಣಕ್ಕೆ ಜಗ್ಗೇಶ್​ ಹೋಗಿದ್ದರು. ರಾತ್ರಿ10ಕ್ಕೆ ರೈಲು ಹಳಿಯಿಂದ ಯಾರೋ ಚೀರುತ್ತಿದ್ದ ಶಬ್ಧ ಇವರಿಗೆ ಕೇಳಿಸಿತು. ಗಾಬರಿಯಿಂದ ಬಗ್ಗಿ ನೋಡಿದಾಗ ವ್ಯಕ್ತಿಯ ಕಾಲುಗಳು ತುಂಡಾಗಿರುತ್ತವೆ. ತಲೆ ರೈಲು ಚಕ್ರಗಳ ಮಧ್ಯೆ ಸಿಲುಕಿಕೊಂಡಿರುತ್ತದೆ. ಚಲಿಸಲು ರೆಡಿಯಾಗಿದ್ದ ರೈಲು ಹಾರನ್ ಹಾಕುತ್ತಿರುತ್ತದೆ. ಇದನ್ನು ನೋಡಿದ ಜಗ್ಗೇಶ್​ ಕೂಡಲೇ ತನ್ನ PA ರಾಮಲಿಂಗಯ್ಯನಿಗೆ ರೈಲು ನಿಲ್ಲಿಸಲು ಹೇಳುತ್ತಾರೆ. ಆತ ಇಂಜಿನ್ ಮಂದೆ ನಿಂತೆ ಬಿಡುತ್ತಾನೆ.

ಜಗ್ಗೇಶ್​ ತಮ್ಮ ಗನ್ ಮ್ಯಾನ್ ರಾಘವೇಂದ್ರ ಸಹಾಯದಿಂದ ಆತನನ್ನು ಮೇಲೆ ಎಳೆಯುತ್ತಾರೆ. ತುಂಡಾದ ಕಾಲುಗಳು, ರಕ್ತಸ್ರಾವ, ಮಾತಾಡಲು ಆಗದೆ ಜೀವಹೋಗುತ್ತಿತ್ತು.ಕೂಡಲೇ ಆ್ಯಂಬುಲೆನ್ಸ್​​​ ತರಿಸಿ ಸಮಯಕ್ಕೆ ಸರಿಯಾಗಿ ಬೌರಿಂಗ್ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆ ಮುಖ್ಯಸ್ಥ ಡಾ.ತಿಲಕ್ ಕೂಡ ಜಗ್ಗೇಶ್​ ಆತ್ಮೀಯರಾಗಿರುತ್ತಾರೆ. ಸಾಕ್ಷಾತ್ ಶಿವನಂತೆ ಡಾ.ತಿಲಕ್ ಅವರು ಗಾಯಾಳುವಿಗೆ ಶಸ್ತ್ರಚಿಕಿತ್ಸೆ ಮಾಡಿ ಉಳಿಸಿಬಿಟ್ಟರು.

ಅಷ್ಟಕ್ಕೆ ಸುಮ್ಮನಾಗದ ಜಗ್ಗೇಶ್​, 6 ತಿಂಗಳ ನಂತರ ಆತನಿಗೆ ಕೃತಕ ಕಾಲು ಹಾಕಿಸುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಆ ವ್ಯಕ್ತಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಜಗ್ಗೇಶ್​ ಅವರೇ ಸಹಾಯ ಮಾಡುತ್ತಿದ್ದಾರೆ.

ನಿಮ್ಮ ಕೈಲಾದ ಸಹಾಯ ಮಾಡಿ ಎಂದ ಜಗ್ಗೇಶ್ :

ಸದ್ಯ ಈ ಮೇಲಿನ ನೈಜ ಘಟನೆ ಹೇಳಿಕೊಂಡಿರುವ ನವರಸ ನಾಯಕ ಜಗ್ಗೇಶ್​, ಈತನ ಹೆಸರು ವಿಜಯ್ ಕುಮಾರ್. ಈ ಬಡಪಾಯಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ರಾಯರು ಮನಸ್ಸು ಕೊಟ್ಟರೆ ದಯಮಾಡಿ ಕೈಲಾದಷ್ಟು ಇವನಿಗೆ ಸಹಾಯಮಾಡಿ ಎಂದು ವಿನಂತಿಸಿಕೊಂಡಿದ್ದಾರೆ. ಆತನ ಮಗ ಬಹಳ ಪ್ರತಿಭಾವಂತನಂತೆ. ಈತನಿಗೆ ಸಹಾಯ ಮಾಡಲು ಬಯಸುವವರು 8861123498 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.