ಗೋಲ್ಡನ್ ಸ್ಟಾರ್ ಗಣೇಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ, 42ನೇ ವಸಂತಕ್ಕೆ ಕಾಲಿಟ್ಟಿರುವ ಗಣಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಆದರೆ ಈ ವರ್ಷ ಕೊರೊನಾ ಕಾಟದಿಂದ ಗಣೇಶ್, ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ.
- " class="align-text-top noRightClick twitterSection" data="">
ಇನ್ನು ಹುಟ್ಟುಹಬ್ಬದ ಖುಷಿಯಲ್ಲಿರುವ ಮಳೆ ಹುಡುಗನಿಗೆ ಡಬಲ್ ಸಂಭ್ರಮ. ಎರಡು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಗಣೇಶ್ ಒಪ್ಪಿಕೊಂಡಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ವಿಷಯವನ್ನು ಘೋಷಿಸುವ ಮೂಲಕ ಗಣೇಶ್, ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. 'ರಾಯಗಡ' ಹಾಗೂ 'ಚಮಕ್' ಚಿತ್ರ ನಿರ್ದೇಶಕ ಸಿಂಪಲ್ ಸುನಿ ಜೊತೆಗೆ 'ಸಖತ್' ಚಿತ್ರಗಳನ್ನು ಒಪ್ಪಿಕೊಂಡಿದ್ದ ಗಣೇಶ್, ಇದೀಗ ಮತ್ತೊಂದು ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.
'ಜೂಮ್' ಹಾಗೂ 'ಆರೆಂಜ್' ಚಿತ್ರಗಳ ನಂತರ ಗಣೇಶ್ ಹಾಗೂ ನಿರ್ದೇಶಕ ಪ್ರಶಾಂತ್ ರಾಜ್ ಕಾಂಬಿನೇಷನ್ನಲ್ಲಿ ಮತ್ತೊಂದು ಹೊಸ ಚಿತ್ರ ಬರಲಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಪ್ರೊಡಕ್ಷನ್ ನಂ 7 ಹೆಸರಿನಲ್ಲಿ ಈ ಚಿತ್ರ ಅನೌನ್ಸ್ ಆಗಿದೆ. ಗಣೇಶ್ ಹುಟ್ಟುಹಬ್ಬದ ಸ್ಪೆಷಲ್ ಗಿಫ್ಟ್ ಆಗಿ ಈ ಚಿತ್ರದ ಫಸ್ಟ್ಲುಕ್ ರಿಲೀಸ್ ಆಗಿದೆ.
ಈ ಹೊಸ ಚಿತ್ರದ ಹಾಡುಗಳಿಗೆ ಎಸ್.ಎಸ್. ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದು ಪ್ರಶಾಂತ್ ರಾಜ್ ಗಣೇಶ್ ಮತ್ತು ತಮನ್ ಮೂವರಿಗೂ ಇದು ಹ್ಯಾಟ್ರಿಕ್ ಸಿನಿಮಾ ಆಗಿದೆ. ಇದರ ಜೊತೆಗೆ ನಿನ್ನೆ ಸುನಿ ನಿರ್ದೇಶನ 'ಸಖತ್' ಚಿತ್ರದ ಮೋಷನ್ ಪೋಸ್ಟರ್ ಕೂಡಾ ಬಿಡುಗಡೆ ಆಗಿದ್ದು ಗಣೇಶ್ ಅಭಿಮಾನಿಗಳು ಬಹಳ ಖುಷಿಯಲ್ಲಿದ್ದಾರೆ.