ETV Bharat / sitara

‘ಗೋಲ್ಡನ್​ ಸ್ಟಾರ್​’ ಗಣೇಶ್ ಹೀರೋ ಆಗಿ 15 ವರ್ಷಗಳಾದವಾ? - ನಟ ಗಣೇಶ್​,

‘ಗೋಲ್ಡನ್ ಸ್ಟಾರ್’ ಗಣೇಶ್ ಪಾಲಿಗೆ ನಿನ್ನೆ ಬಹಳ ಮುಖ್ಯವಾದ ದಿನ. ಏಕೆಂದರೆ ಗಣೇಶ್ ಚಿತ್ರರಂಗಕ್ಕೆ ಬಂದು ನಿನ್ನೆಗೆ 15 ವರ್ಷಗಳಾಗಿವೆ.

Actor Ganesh 15 years completed, Actor Ganesh 15 years completed in Film industry, Actor Ganesh, Actor Ganesh news, 15 ವರ್ಷಗಳು ಪೂರ್ಣಗೊಳಿಸಿದ ನಟ ಗಣೇಶ್​, ಚಿತ್ರರಂಗಕ್ಕೆ ಬಂದು 15 ವರ್ಷಗಳು ಪೂರ್ಣಗೊಳಿಸಿದ ನಟ ಗಣೇಶ್​, ನಟ ಗಣೇಶ್​, ನಟ ಗಣೇಶ್​ ಸುದ್ದಿ,
ನಟ ಗಣೇಶ್​
author img

By

Published : Apr 22, 2021, 10:27 AM IST

Updated : Apr 22, 2021, 1:06 PM IST

ಗಣೇಶ್ ಹೀರೋ ಆಗಿ ಅಭಿನಯಿಸಿದ ಮೊದಲ ಚಿತ್ರ ‘ಚೆಲ್ಲಾಟ’. ನಿನ್ನೆ ದಿನ ಈ ಚಿತ್ರ ಸರಿಯಾಗಿ 15 ವರ್ಷಗಳ ಹಿಂದೆ ಮೇನಕಾ ಮತ್ತು ಇನ್ನಿತರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಲಯಾಳಂನ ರೀಮೇಕ್ ಆದ ಈ ಚಿತ್ರ ಹಿಟ್ ಆಗಿ 100 ದಿನ ಪ್ರದರ್ಶನ ಸಹ ಕಂಡಿತ್ತು. ಆ ನಿಟ್ಟಿನಲ್ಲಿ ಗಣೇಶ್‍ಗೆ ನಿನ್ನೆ ಬಹಳ ಮುಖ್ಯವಾದ ದಿನ.

  • 'ಚೆಲ್ಲಾಟ" ಬಿಡುಗಡೆಯಾಗಿ ಇಂದಿಗೆ ಹದಿನೈದು ವಸಂತಗಳು.
    ನಿಮ್ಮ ಅಭಿಮಾನದ ಆರೈಕೆಯಲ್ಲಿ ಬೆಳೆದವನು ನಾನು. ಇದೇ ಪ್ರೀತಿ,ಅಭಿಮಾನ ನನಗೆ ಆಶೀರ್ವಾದ ವಾಗಿರಲಿ.
    ಕೊರೋನಾ ಸಂಕಷ್ಟದಲ್ಲಿ ಜೋಪಾನವಾಗಿರೋಣ.
    ಇತರರ ಕಷ್ಟಗಳಿಗೆ ಸ್ಪಂದಿಸೋಣ.🙏🙏🙏 pic.twitter.com/KCncbW7dGV

    — Ganesh (@Official_Ganesh) April 21, 2021 " class="align-text-top noRightClick twitterSection" data=" ">

ಗಣೇಶ್ ಹೀರೋ ಆಗಿ 15 ವರ್ಷಗಳದರೂ ಅವರು ಚಿತ್ರರಂಗಕ್ಕೆ ಬಂದು ಇನ್ನೂ ಜಾಸ್ತಿ ಸಮಯವಾಗಿದೆ. 2002ರಲ್ಲಿ ಬಿಡುಗಡೆಯಾದ ಬಿ.ಸುರೇಶ್ ನಿರ್ದೇನದ `ಟಪೋರಿ' ಚಿತ್ರದಲ್ಲಿ ನಟಿಸುವ ಮೂಲಕ ಗಣೇಶ್ ಚಿತ್ರರಂಗಕ್ಕೆ ಬಂದಿದ್ದು ಗೊತ್ತೇ ಇದೆ. ನಂತರದ ದಿನಗಳಲ್ಲಿ ಅವರು `ಹುಡುಗಿಗಾಗಿ', `ಗೇಮ್', `ಅಬ್ಬಬ್ಬಾ ಎಂಥಾ ಹುಡುಗ', `ಬಾ ಬಾರೋ ರಸಿಕ', `ಮಸಾಲ', `ಅಮೃತಧಾರೆ', `ಅಹಂ ಪ್ರೇಮಾಸ್ಮಿ' ಮುಂತಾದ ಚಿತ್ರಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ `ಚೆಲ್ಲಾಟ' ಮೂಲಕ ಹೀರೋ ಆದ ಗಣೇಶ್ ಮತ್ತೆ ಹಿಂದಿರುಗಿ ನೋಡಲಿಲ್ಲ.

ನಾಯಕನಾಗಿ 15 ವರ್ಷ ಪೂರೈಸಿದ ಹಿನ್ನೆಲೆ ಟ್ವೀಟ್ ಮಾಡಿರುವ ಗಣೇಶ್, `ಚೆಲ್ಲಾಟ ಬಿಡುಗಡೆಯಾಗಿ 15 ವಸಂತಗಳಾಗಿವೆ. ನಿಮ್ಮ ಅಭಿಮಾನದ ಆರೈಕೆಯಲ್ಲಿ ಬೆಳೆದವನು ನಾನು. ಇದೇ ಪ್ರೀತಿ, ಅಭಿಮಾನ ನನಗೆ ಆಶೀರ್ವಾದವಾಗಿರಲಿ. ಕೊರೊನಾ ಸಂಕಷ್ಟದಲ್ಲಿ ಜೋಪಾನವಾಗಿರೋಣ. ಇತರರ ಕಷ್ಟಗಳಿಗೆ ಸ್ಪಂದಿಸೋಣ' ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.

Last Updated : Apr 22, 2021, 1:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.