ಕೊರೊನಾದಿಂದಾಗಿ ಇಡೀ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ಧ ಆಗಿದೆ. ಈ ಸಂದರ್ಭದಲ್ಲಿ ಕೆಲ ತಾರೆಯರು ಸಿನಿಮಾ ಕಾರ್ಮಿಕರಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಕಲಿವೀರ ಸಿನಿಮಾ ಖ್ಯಾತಿಯ ಏಕಲವ್ಯ ಕೂಡ ಅಪ್ಪಟ ರೈತನಾಗಿದ್ದಾರೆ.
ಸ್ವಂತ ಪರಿಶ್ರಮದಿಂದ ಸಮರ ಕಲೆ, ಯೋಗಾಸನ ಕಲಿತಿರುವ ಏಕಲವ್ಯ ಕಲಿವೀರ ಸಿನಿಮಾ ಮೂಲಕ ಚಿತ್ರರಂಗದಲ್ಲಿ ಮಿಂಚೋದಿಕ್ಕೆ ರೆಡಿಯಾಗಿದ್ದಾರೆ. ಇನ್ನೇನು ಕಲಿವೀರ ಸಿನಿಮಾ ತೆರೆಗೆ ಬರಬೇಕು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಕೊರೊನಾ ಎರಡನೇ ಅಲೆ ಬಂದು ಲಾಕ್ಡೌನ್ ಘೋಷಣೆಯಾಗಿ ಅಡ್ಡಿಯಾಗಿತ್ತು. ಹೀಗಾಗಿ ಏಕಲವ್ಯ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ತನ್ನ ಗೆಳೆಯನ ತೋಟದಲ್ಲಿ ಕಳೆದ 20 ದಿನಗಳಿಂದ ಕೆಲಸ ಮಾಡುತ್ತಿದ್ದಾರೆ. ರೇಷ್ಮೆ ಬೆಳೆಗೆ ನೀರು ಬಿಡೋದು, ರೇಷ್ಮೆ ಹುಳು ಸಾಕಾಣಿಕೆ ಮಾಡುವ ಕೆಲಸವನ್ನು ಏಕಲವ್ಯ ಮಾಡ್ತಾ ಇದ್ದಾರಂತೆ. ಏಕಲವ್ಯ ಅವರಿಗೆ ತೋಟದಲ್ಲಿ ಕೆಲಸ ಮಾಡೋದು ತುಂಬಾನೇ ಖುಷಿ ಕೊಡುತ್ತೆ ಅಂತೆ.
ಲಾಕ್ಡೌನ್ ಮುಗಿದ ಮೇಲೆ ಕಲಿವೀರ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಇನ್ನು ಕೊರೊನಾದಿಂದ ಎಲ್ಲರೂ ಜಾಗರೂಕತೆಯಿಂದಿರಿ ಎಂದು ಏಕಲವ್ಯ ಮನವಿ ಮಾಡಿದ್ದಾರೆ. ಕಲಿವೀರ ಚಿತ್ರವನ್ನು ಕನ್ನಡ ದೇಶದೋಳ್ ಚಿತ್ರದ ನಿರ್ದೇಶಕ ಅವಿನಾಶ್ ಭೂಷಣ್ ನಿರ್ದೇಶಿಸಿದ್ದಾರೆ.