ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ನಡುವಿನ ವಾಕ್ಸಮರ ದಿನೇ ದಿನೇ ಹೊಸ ರೂಪ ಪಡೆಯುತ್ತಿದೆ. ಇದೀಗ ಸುಮಲತಾ ಅಂಬರೀಶ್ ಪರವಾಗಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ದೊಡ್ಡಣ್ಣ, ಅಂಬರೀಶ್ ಸ್ಮಾರಕ ಮಾಡಿದ್ದು ಕುಮಾರಸ್ವಾಮಿ ಅಲ್ಲ. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಿದ್ದು ಅಂತ ನಾನು ಎದೆ ತಟ್ಟಿ ಹೇಳಬಲ್ಲೆ ಎಂದರು. ಇದೇ ವೇಳೆ, ಕುಮಾರಸ್ವಾಮಿ ಯಾವ ನಟರಿಗೂ ಕಮ್ಮಿಯಿಲ್ಲ ಎಂದರು.
ಸ್ಮಾರಕ ಸಂಬಂಧ ಅವರ ಬಳಿ ಹೋದಾಗ, 'ಇವನು ಏನು ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ' ಎಂದು ಕುಮಾರಸ್ವಾಮಿ ಹೇಳಿದ್ದರು ಎಂದು ದೊಡ್ಡಣ್ಣ ನೆನಪಿಸಿದರು. ಅಂಬರೀಶ್ ಸತ್ತಾಗ, ಅಭಿ, ಸುಮಲತಾ, ನಾನು, ರಾಕ್ಲೈನ್ ಇದ್ದೆವು. ಬೆಂಗಳೂರಲ್ಲೇ ವ್ಯವಸ್ಥೆ ಮಾಡೋಣ ಅಂದಿದ್ರು ಕುಮಾರಸ್ವಾಮಿ. ನಾವು ಗ್ಲಿಸರಿನ್ ಹಾಕಿ ಅಳ್ತೀವಿ. ಆದರೆ ಕುಮಾರಸ್ವಾಮಿ ಮುಖಕ್ಕೆ ಕರ್ಚೀಫ್ ಇಟ್ಕೊಂಡು ಅಳ್ತಾರೆ ಅಂತಾ ದೊಡ್ಡಣ್ಣ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.