ಪೊಗರು ಸಿನಿಮಾದಲ್ಲಿ ವಿಶಿಷ್ಟ ಕೇಶ ವಿನ್ಯಾಸದಿಂದ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ತುಂಬಾ ಸಮಯದ ಬಳಿಕ ಲುಕ್ ಬದಲಾಯಿಸಿಕೊಂಡು ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ಜೊತೆ ಮದುವೆ ಸಮಾರಂಭವೊಂದಕ್ಕೆ ಆಗಮಿಸಿದ್ದ ಧ್ರುವ ಸರ್ಜಾರ ಹೊಸ ಲುಕ್ ಕಂಡ ಅಭಿಮಾನಿಗಳು ಸಂತಸಗೊಂಡರು.
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಮಾನಸ ಎಂಬುವರೊಂದಿಗೆ ನಿನ್ನೆ ಹಸೆಮಣೆ ಏರಿದ್ದಾರೆ. ದಂಪತಿಗೆ ಶುಭಕೋರಲು ಸರ್ಜಾ ದಂಪತಿ ಆಗಮಿಸಿದ್ದರು. ಈ ವೇಳೆ ಧ್ರುವ ಅವರ ಲುಕ್ ನೋಡಿದ ಅಭಿಮಾನಿಗಳು ಒಂದು ಕ್ಷಣ ಪುಳಕಿತರಾಗಿದ್ದು ಸುಳ್ಳಲ್ಲ. ಯಾಕೆಂದರೆ ಪೊಗರು ಸಿನಿಮಾದಲ್ಲಿದ್ದ ಮಾಸ್ ಲುಕ್ ಧ್ರುವ ಕಂಪ್ಲೀಟ್ ಬದಲಾಗಿದ್ದರು.
ಮದುವೆ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ ಬಿಳಿ ಕುರ್ತಾದಲ್ಲಿ ಮಿಂಚುತ್ತಿದ್ದರೆ ಅವರ ಪತ್ನಿ ಪ್ರೇರಣಾ ಶಂಕರ್ ಪೀಚ್ ಕಲರ್ನ ಸಲ್ವಾರ್ನಲ್ಲಿ ಕಂಗೊಳಿಸುತ್ತಿದ್ದರು. ಸದ್ಯ, ಧ್ರುವ ಅವರ ಹೊಸ ಲುಕ್ನ ಫೋಟೋ ವೈರಲ್ ಎಲ್ಲೆಡೆ ವೈರಲ್ ಆಗಿದೆ.
ಓದಿ : "ವಿಜಯ್ ಬದುಕುವ ಸಾಧ್ಯತೆ ಕಡಿಮೆ, ಅಂಗಾಂಗ ದಾನಕ್ಕೆ ಕುಟುಂಬಸ್ಥರ ನಿರ್ಧಾರ"