ಬೆಂಗಳೂರು: ಅದ್ಧೂರಿ, ಬಹದ್ಧೂರ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಧ್ರುವ ಸರ್ಜಾ. ಅಕ್ಟೋಬರ್ 6 ಬಂತು ಎಂದರೆ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಖುಷಿಯೋ ಖುಷಿ. ಏಕೆಂದರೆ, ಅಂದು ಭರ್ಜರಿ ಹುಡುಗನ ಹುಟ್ಟುಹಬ್ಬದ ಸಂಭ್ರಮ.
ಪ್ರತಿ ವರ್ಷ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಅದ್ದೂರಿಯಾಗಿ, ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದ ಧ್ರುವ, ಈ ಬಾರಿ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.
ರಾಮನಂತೆ ಇದ್ದ ಅಣ್ಣನ ಅಗಲಿಕೆ ಹಾಗೂ ಕೊರೊನಾ ಇರುವ ಕಾರಣ ಧ್ರುವ ಈ ನಿರ್ಧಾರ ಕೈಗೊಂಡಿದ್ದು, ಅಭಿಮಾನಿಗಳಿಗೆ ಸಂದೇಶವನ್ನ ನೀಡಿದ್ದಾರೆ. ‘ಅಭಿಮಾನಿಗಳೇ ನಮ್ಮ ಅನ್ನದಾತರು, ನೀವೇ ನಮ್ಮ ಶಕ್ತಿ, ಪ್ರತಿವರ್ಷ ಹುಟ್ಟು ಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ, ಅಭಿಮಾನಿ ವರ್ಣನಾತೀತ. ಈ ವರ್ಷ ಎಲ್ಲ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನ ಮನೆಯ ಬಳಿ ಬರಬೇಡಿ ಎನ್ನಲು ಮನಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀ ರಕ್ಷೆ. ಜೈ ಆಂಜನೇಯ’ ಅಂತಾ ಅಭಿಮಾನಿಗಳಿಗೆ ಪ್ರೀತಿಯ ಸಂದೇಶ ನೀಡಿದ್ದಾರೆ.