ETV Bharat / sitara

ಸುಮಲತಾ ಬರ್ತಡೇ ಪಾರ್ಟಿಯಲ್ಲಿ ಸ್ಯಾಂಡಲ್​ವುಡ್​ ತಾರಾ ಬಳಗ... ಯಾರೆಲ್ಲ ಭಾಗಿಯಾಗಿದ್ರೂ ನೋಡಿ! - ಸುಮಲತಾ ಹುಟ್ಟುಹಬ್ಬದಲ್ಲಿ ಯಶ್,ಉಪೇಂದ್ರ,ದರ್ಶನ್ ಭಾಗಿ

ನಟಿ ಹಾಗೂ ರಾಜಕಾರಿಣಿ ಸುಮಲತಾ ಅಂಬರೀಶ್​ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಆಪ್ತರಿಗೆ ಪಾರ್ಟಿ ಆಯೋಜನೆ ಮಾಡಿ ಬರ್ತ್​ ಡೇ ಅನ್ನು ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಅನೇಕರು ಭಾಗಿಯಾಗಿದ್ದರು.

Sumalatha Ambarish Birthday party
ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮ
author img

By

Published : Aug 28, 2021, 8:10 PM IST

Updated : Aug 28, 2021, 8:27 PM IST

ಕನ್ನಡ ಚಿತ್ರರಂಗದಲ್ಲಿ ಅಭಿನಯದ ಮೂಲಕ ಛಾಪು ಮೂಡಿಸಿರುವ ನಟಿ ಹಾಗೂ ರಾಜಕಾರಿಣಿ ಸುಮಲತಾ ಅಂಬರೀಶ್​ 59ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸುಮಲತಾ ತಮ್ಮ ಹುಟ್ಟುಹಬ್ಬಕ್ಕೆ ಆಪ್ತರಿಗೆ ಪಾರ್ಟಿ ನೀಡಿದ್ದಾರೆ.

Sumalatha Ambarish Birthday party
ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಸಂಭ್ರಮ

ಪಂಚಭಾಷಾ ತಾರೆಯಾಗಿ ಮಿಂಚಿರುವ ಸುಮಲತಾ ಅಂಬರೀಶ್, ತಮ್ಮ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಪಾರ್ಟಿಗೆ ಕೇವಲ ತಮ್ಮ ಆಪ್ತರನ್ನು ಮಾತ್ರ ಸುಮಲತಾ ಆಹ್ವಾನಿಸಿದ್ದರು.

Sumalatha Ambarish Birthday party
ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರು, ಗಣ್ಯರು

ಬರ್ತ್​ಡೇ ಪಾರ್ಟಿಯಲ್ಲಿ ನಟ ದರ್ಶನ್, ಯಶ್-ರಾಧಿಕಾ, ಪ್ರಿಯಾಂಕ ಉಪೇಂದ್ರ, ನಿರ್ಮಾಪಕ ರಾಕ್​ಲೈನ್​​ ವೆಂಕಟೇಶ್, ಸಚಿವ ಕೆ.ಸುಧಾಕರ್, ವಿಷ್ಣುವರ್ಧನ್ ಪುತ್ರಿ ಕೀರ್ತಿ ಅನಿರುದ್ಧ್ ಸೇರಿದಂತೆ ಕುಟುಂಬಸ್ಥರು, ಗೆಳೆಯರು ಭಾಗಿಯಾಗಿದ್ದಾರೆ.

Sumalatha Ambarish Birthday party
ಪಾರ್ಟಿಯಲ್ಲಿ ಭಾಗಿಯಾಗಿದ್ದ ಯಶ್,ದರ್ಶನ್, ಗುರುಕಿರಣ್​

ಸಂಸದೆ ಸುಮಲತಾ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜೋಡೆತ್ತುಗಳೆಂದು ಕರೆಯಿಸಿಕೊಂಡಿರುವ ನಟ ದರ್ಶನ್ ಮತ್ತು ಯಶ್ ಭಾಗಿಯಾಗಿದ್ದರು. ಯಶ್ ಜೊತೆಗೆ ಪತ್ನಿ ರಾಧಿಕಾ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸ್ಯಾಂಡಲ್​​​​ವುಡ್​ನ ಸಾಕಷ್ಟು ಮಂದಿ ಭಾಗಿಯಾಗಿದ್ದರು.

ಸುಮಲತಾರ ಹುಟ್ಟುಹಬ್ಬಕ್ಕೆ ಕೇವಲ ನಟ-ನಟಿಯರು ಮಾತ್ರವಲ್ಲದೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಆಪ್ತರು ಶುಭ ಕೋರಿದ್ದಾರೆ.

Sumalatha Ambarish Birthday party
ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್​

ಬಹಳ ದಿನಗಳ ಬಳಿಕ ಯಶ್, ದರ್ಶನ್, ಉಪೇಂದ್ರ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಗುರುಕಿರಣ್ ಫ್ಯಾಮಿಲಿ ಸೇರಿದಂತೆ ಸಾಕಷ್ಟು ಕಲಾವಿದರು ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಸುಮಲತಾ ಅಂಬರೀಷ್ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

Last Updated : Aug 28, 2021, 8:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.