ಕಳೆದ ಕೆಲ ತಿಂಗಳಹಿಂದೆ ಅಗಲಿದ ಅಂಬಿ ಅವರನ್ನು ದರ್ಶನ್ ನೆನಪಿಸಿಕೊಂಡಿದ್ದಾರೆ. ನಿನ್ನೆ ನಡೆದ ಯಜಮಾನ ಚಿತ್ರದ ಮಾಧ್ಯಮಗೋಷ್ಟಿಯಲ್ಲಿ ಅಂಬರೀಶ್ ಅವರ ಕೊನೆ ಆಸೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ದಚ್ಚು ನೋವು ತೋಡಿಕೊಂಡ್ರು.
ದರ್ಶನ್ ಯಜಮಾನ ಚಿತ್ರದ ಸಾಂಗ್ ಶೂಟಿಂಗ್ಗೆ ಸ್ವೀಡನ್ ಹೋಗುವ ಮುನ್ನ ಅಂಬರೀಶ್ ಅವರಿಗೆ ಕಾಲ್ ಮಾಡಿ, ಅಪ್ಪಾಜಿ ನಿಮಗೆ ಏನು ತರಲಿ ಎಂದು ಕೇಳಿದ್ದರಂತೆ.
ಒಂದು ವಾಚ್ ತೆಗೆದುಕೊಂಡು ಬರುವಂತೆ ಅಂಬಿ ಉತ್ತರಿಸಿದ್ದರಂತೆ. ಆದರೆ, ಶೂಟಿಂಗ್ ಮುಗಿದ ಬಳಿಕ ಸ್ವೀಡನ್ ಬದಲಿಗೆ ಬೆಂಗಳೂರಿನಲ್ಲಿಯೇ ನೀವು ತೋರಿಸಿದ ವಾಚ್ ಕೊಡಿಸುವುದಾಗಿ ದರ್ಶನ್ ವಿದೇಶಕ್ಕೆ ತೆರಳಿದ್ರಂತೆ. ಈ ಸಂಭಾಷಣೆ ನೆನೆದ ದಚ್ಚು, ವಿಧಿಯಾಟ ಬೇರೆಯಾಗಿತ್ತು ಎಂದು ಒಂದು ಕ್ಷಣ ಅಂಬಿಯನ್ನು ನೆನೆದು ಭಾವುಕರಾದರು.