ಮೈಸೂರು: ನಗರದ ಸಂದೇಶ್ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನಲಾದ ಆರೋಪ ಸಂಬಂಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ದರ್ಶನ್ ಹರಿಹಾಯ್ದಿದ್ದಾರೆ.
ತಿ.ನರಸೀಪುರ ತಾಲೂಕು ರಸ್ತೆಯಲ್ಲಿರುವ ತಮ್ಮ ಫಾರಂ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು 10ನೇ ತರಗತಿ ಪಾಸ್ ಅಷ್ಟೇ. ಆದರೆ, ನಾನು ಕಲಾವಿದನಾಗಬೇಕು ಅಂತ ಕಲೆ ವಿಷಯ ಅಧ್ಯಯನ ಮಾಡಿದ್ದೀನಿ. ಇಂದ್ರಜಿತ್ ಲಂಕೇಶ್ ನಿರ್ದೇಶಕ ಅಂತಾರಲ್ಲ, ಯಾವ ಸೀಮೆ ನಿರ್ದೇಶಕ ಎಂದು ಏಕವಚನದಲ್ಲೇ ನಿಂದಿಸಿದ್ದಾರೆ.
ನನ್ನ ವಾಯ್ಸ್ ರೆಕಾರ್ಡ್ ಇದ್ದರೆ ಇಂದ್ರಜಿತ್ ಲಂಕೇಶ್ ಬಿಡುಗಡೆ ಮಾಡಲಿ, ನಾನು ಯಾರಿಗೂ ಹೆದರಲ್ಲ. ಪದೇ ಪದೆ ಕ್ಷಮೆ ಕೇಳುವುದಿಲ್ಲ. ನಾನು ಹಾಲು ಕರೆಯಲು ರೆಡಿ, ದೊಡ್ಡ ಮಟ್ಟದ ಕಾರು ಓಡಿಸಲೂ ರೆಡಿ ಎಂದು ಗುಡುಗಿದರು.
ತಾಕತ್ತಿದ್ದರೆ ಚಿತ್ರ ನಿರ್ದೇಶನ ಮಾಡ್ಲಿ
ತಾಕತ್ತಿದ್ರೆ ಇಂದ್ರಜಿತ್ ಒಂದು ಚಿತ್ರ ನಿರ್ದೇಶನ ಮಾಡಲಿ, ನಾನು ಮೆಜೆಸ್ಟಿಕ್ ಮಾಡಲು ರೆಡಿ, ಸಂಗೊಳ್ಳಿ ರಾಯಣ್ಣ ಮಾಡಲು ರೆಡಿ, ಇಂದ್ರಜಿತ್ ಬಳಿ ನಾನು ಮಾತನಾಡಿರುವ ಆಡಿಯೋ ಇದೆ ತಾನೆ? ಅದನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ನಾನು ಯಾರಿಗೂ ಆನ್ಸರೇಬಲ್ ಅಲ್ಲ. ನನ್ನ ಅಭಿಮಾನಿಗಳಿಗೆ ಮಾತ್ರ ಆನ್ಸರೇಬಲ್ ಎಂದು ಲಂಕೇಶ್ ವಿರುದ್ಧ ವಾಗ್ದಾಳಿ ನಡೆಸಿದರು. ಇದೆಲ್ಲಾ ಉಮಾಪತಿಯಿಂದಲೇ ಡೈವರ್ಟ್ ಆಗ್ತಿದೆ. ದೊಡ್ಮನೆ ವಿಚಾರ ಬರದಿದ್ರೆ ನಾನು ರಿಯಾಕ್ಟ್ ಮಾಡ್ತಿರಲಿಲ್ಲ.
ಬೇಕಂತಲೇ ನನ್ನನ್ನು ಪ್ರಚೋದಿಸ್ತಿದ್ದಾರೆ
ನಾವೆಲ್ಲ ಮೂರು ಬಿಟ್ಟು ನಿಂತವರೇ. ಬೇಕಂತಲೇ ನನ್ನನ್ನು ಪ್ರಚೋದನೆ ಮಾಡ್ತಿದ್ದಾರೆ. ನನ್ನ ವಿಚಾರದಲ್ಲಿ ತುಂಬಾ ಜನ ಆಟವಾಡ್ತಿದಾರೆ. ನಾನೇನು ಕೊಲೆ ಮಾಡಿದ್ದೀನಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮಪ್ಪನು ಕೂಡು ದೊಡ್ಮನೆಯಿಂದಲ್ಲೇ ಬಂದವರು, ದೊಡ್ಮನೆಯ ಹುಲ್ಲಿಗೆ ನಾವು ಸಮನಲ್ಲ ಎಂದು ನಿರ್ಮಾಪಕ ಉಮಾಪತಿಗೆ ಟಾಂಗ್ ಕೊಟ್ಟರು.