ಚಾಲೆಂಜಿಂಗ್ ಸ್ಟಾರ್ ದರ್ಶನ್ ಶೂಟಿಂಗ್ ಇಲ್ಲ ಅಂದ್ರೆ ಸಾಕು. ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ಸೇರಿಬಿಡುತ್ತಾರೆ. ಫಾರ್ಮ್ ನಲ್ಲಿ ಹಾಲು ಕರೆಯುವುದು ಹಸುಗಳನ್ನು ಸಾಕುವುದು ಹಾಗೂ ಕುದುರೆ ಆರೈಕೆ ಮಾಡುವುದರ ಜೊತೆಗೆ ದಾಸ ಕುದುರೆ ಸವಾರಿ ಮಾಡಿ ಟೈಂ ಪಾಸ್ ಮಾಡ್ತಾರೆ. ಕಳೆದೆರಡು ತಿಂಗಳಿಂದ ಶೂಟಿಂಗ್ ಇಲ್ಲದ ಕಾರಣ ದರ್ಶನ್ ಹೆಚ್ಚು ಸಮಯವನ್ನು ಮೈಸೂರಿನಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲೇ ಕಳೆಯುತ್ತಿದ್ದಾರೆ. ಜೊತೆಗೆ ಹಾರ್ಸ್ ರೈಡಿಂಗ್ ಮೂಲಕ "ರಾಜ ವೀರಮದಕರಿ" ಚಿತ್ರಕ್ಕೆ ಭರ್ಜರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ದರ್ಶನ್ ಅವರು ತಮ್ಮ ನೆಚ್ಚಿನ ಕುದುರೆ ಸವಾರಿಯಲ್ಲಿ ಬ್ಯುಸಿಯಾಗಿದ್ದಾರೆ. ರಾಜ ವೀರ ಮದಕರಿ ಚಿತ್ರದಲ್ಲಿ ದರ್ಶನ್ ಮದಕರಿ ನಾಯಕನ ಪಾತ್ರದಲ್ಲಿ ಮಿಂಚಲಿದ್ದು, ಆ ಪಾತ್ರಕ್ಕೆ ಕುದುರೆ ಸವಾರಿ ಪ್ರಮುಖವಾಗಿದೆ. ದಾಸ ಕೂಡ ಹಾರ್ಸ್ ರೈಡಿಂಗ್ ನಲ್ಲಿ ಈಗಾಗಲೇ ಚೆನ್ನಾಗಿ ಪಳಗಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ಕೇರಳದಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿ ಬಂದಿರುವ ಚಿತ್ರತಂಡ, ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ಕೊಟ್ಟ ಕೂಡಲೇ 2ನೇ ಶೆಡ್ಯೂಲ್ ಚಿತ್ರೀಕರಣಕ್ಕೆ ಪ್ಲಾನ್ ಮಾಡಿಕೊಂಡಿದೆ. "ರಾಜ ವೀರ ಮದಕರಿ" ಚಿತ್ರಕ್ಕೆ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದು, ಅದ್ಧೂರಿ ವೆಚ್ಚದಲ್ಲಿ ಧೀರ ರಾಕ್ ಲೈನ್ ವೆಂಕಟೇಶ ಚಿತ್ರವನ್ನು ನಿರ್ಮಾಣ ಮಾಡ್ತಿದ್ದಾರೆ.