ಸ್ಯಾಂಡಲ್ವುಡ್ನಲ್ಲಿ ತಾನೊಬ್ಬ ಸ್ಟಾರ್ ನಟನಾಗಿದ್ರೂ, ಪ್ರಾಣಿ ಪಕ್ಷಿಗಳು ಅಂದ್ರೆ ದರ್ಶನ್ಗೆ ಪಂಚಪ್ರಾಣ. ಸದ್ಯ ಲಾಕ್ಡೌನ್ನಿಂದಾಗಿ ಕಳೆದ ಒಂದು ವಾರದಿಂದ ಮೈಸೂರಿನಲ್ಲಿರುವ ಫಾರಂ ಹೌಸ್ನಲ್ಲಿ ಬ್ಯುಸಿಯಾಗಿದ್ದಾರೆ.
ಹೌದು ಈ ಫಾರಂನಲ್ಲಿ ಹಲವಾರು ಬಗೆಯ ಪಕ್ಷಿಗಳು, ಹಸುಗಳು ಹಾಗು ವೈರಟಿ ತಳಿಯ ಕುದುರೆಗಳು ಗಮನ ಸೆಳೆಯುತ್ತವೆ. ಕೆಲ ದಿನಗಳ ಹಿಂದೆ ಕುದುರೆಗಳ ಮೈ ಮಾಲಿಶ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದರು. ಈಗ ದರ್ಶನ್ ಸೋದರಳಿಯನ ಜೊತೆ ಸೇರಿ ಹಸುಗಳಿಗೆ ಮೇವನ್ನ ಕಟ್ ಮಾಡಿಹಾಕಿ ಪ್ರಾಣಿ ಸೇವೆ ಮಾಡಿದ್ದಾರೆ.
ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ದರ್ಶನ್ ಸೋದರಳಿಯ ಹುಲ್ಲನ್ನು ಕೊಡ್ತಾ ಇದ್ರೆ, ದರ್ಶನ್ ಈ ಹುಲ್ಲುನ್ನ ಮಷಿನ್ನಲ್ಲಿ ಕತ್ತರಿಸುತ್ತಿದ್ದಾರೆ. ಇತ್ತೀಚ್ಚೆಗೆ ಫಾರಂ ಹೌಸ್ನ ಹಸುವೊಂದು ಮರಿ ಹಾಕಿದೆ. ಆ ಮರಿಯನ್ನ ದರ್ಶನ್ ಸೋದರಳಿಯ ಮುದ್ದಾಡಿ ಹಾರೈಕೆ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ಶೂಟಿಂಗ್ ಇಲ್ಲದ ಸಂದರ್ಭದಲ್ಲಿ ಸಾರಥಿ ಈ ಫಾರಂ ಹೌಸ್ನಲ್ಲಿ ಕಾಲ ಕಳೆಯುತ್ತಾರೆ. ತಾನೊಬ್ಬ ಸ್ಟಾರ್ ನಟನಾಗಿದ್ದರೂ ಸಾಕು ಪ್ರಾಣಿಗಳಿಗೆ ಸೇವೆ ಮಾಡುತ್ತಿರುವ ದರ್ಶನ್ ಎಂಜಾಯ್ ಮಾಡ್ತಿದ್ದಾರೆ.