ETV Bharat / sitara

ವಿಶ್ವ ಹುಲಿದಿನದಂದು ಮತ್ತೊಂದು ಹುಲಿ ದತ್ತು ಪಡೆದ ನಟ ದರ್ಶನ್​​

author img

By

Published : Jul 29, 2019, 2:09 PM IST

ಪ್ರಾಣಿಪ್ರಿಯ ನಟ ದರ್ಶನ್ ಕಳೆದ 6 ವರ್ಷಗಳಿಂದ ಹುಲಿ ದತ್ತು ಪಡೆಯುತ್ತಿದ್ದು 'ವಿಶ್ವ ಹುಲಿ ದಿನ'ವಾದ ಇಂದು ಕೂಡಾ ತಮ್ಮ ಮಗನ ಹೆಸರಿನಲ್ಲಿ ಮತ್ತೊಂದು ಹುಲಿಯನ್ನು ಮೈಸೂರು ಮೃಗಾಲಯದಿಂದ ದತ್ತು ಪಡೆದಿದ್ದಾರೆ.

ನಟ ದರ್ಶನ್​​

ಮೈಸೂರು: ಇಂದು ವಿಶ್ವ ಹುಲಿ ದಿನ, 2010 ರಿಂದ ಆರಂಭವಾದ ಈ ಹುಲಿ ದಿನವನ್ನು ಪ್ರತಿವರ್ಷ ಜುಲೈ 29 ರಂದು ಆಚರಿಸಲಾಗುತ್ತಿದೆ. ಅಳಿವಿನಂಚಿನಲ್ಲಿ ಇರುವಂತಹ ಹುಲಿಗಳ ಸಂರಕ್ಷಣೆ ಮಾಡುವುದು ಈ ಹುಲಿ ದಿನದ ಪ್ರಮುಖ ಉದ್ದೇಶ.

ಮಗನ ಹೆಸರಿನಲ್ಲಿ ಪ್ರಾಣಿಗಳನ್ನು ದತ್ತು ಪಡೆದ ನಟ ದರ್ಶನ್

ಈ ವಿಶೇಷ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಂದು ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಪ್ರಾಣಿ ಪ್ರಿಯ ಆಗಿರುವ ದರ್ಶನ್ ಈಗಾಗಲೇ ಅನೇಕ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಕಳೆದ 6 ವರ್ಷಗಳಿಂದ ತಮ್ಮ ಮಗ ವಿನೀಶ್ ದರ್ಶನ್ ಹೆಸರಿನಲ್ಲಿ ದರ್ಶನ್​ ಹುಲಿಗಳನ್ನು ದತ್ತು ಪಡೆಯುತ್ತಿದ್ದಾರೆ. ಈ ವರ್ಷ ಹುಲಿ ದಿನದಂದು ಮೈಸೂರಿನ ಮೃಗಾಲಯದಲ್ಲಿ ಅದೇ ಹುಲಿಯನ್ನು ಮತ್ತೊಂದು ವರ್ಷದ ಅವಧಿಗೆ 2.95 ಲಕ್ಷ ರೂಪಾಯಿ ಚೆಕ್ ನೀಡಿ ದತ್ತು ಪಡೆದಿದ್ದಾರೆ. ಈ ಹುಲಿ ಜೊತೆಗೆ ಮೈಸೂರಿನ ಮೃಗಾಲಯದಲ್ಲಿ ಮತ್ತೊಂದು ಹುಲಿ, ಎರಡು ಅನಕೊಂಡ ಹಾವು ಹಾಗೂ ಒಂದು ಆನೆಯನ್ನು ದತ್ತು ಪಡೆದಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

Intro:ಮೈಸೂರು: ವಿಶ್ವ ಹುಲಿ ದಿನದ ಹಿನ್ನಲೆಯಲ್ಲಿ ತಮ್ಮ ಮಗನ ಹೆಸರಿನಲ್ಲಿಯೇ ಹುಲಿ ದತ್ತುವನ್ನು ಮುಂದುವರೆಸಿದ ನಟ ದರ್ಶನ್

Body:ನಟ ದರ್ಶನ್‌ ಪ್ರಾಣಿ ಪ್ರಿಯ ಅನ್ನುವುದು ಗೊತ್ತಿರುವ ವಿಚಾರ, ಆದರೆ ಕಳೆದ ೬ ವರ್ಷಗಳಿಂದ ತಮ್ಮ ಮಗ ವಿನೀಶ್ ದರ್ಶನ್ ಹೆಸರಿನಲ್ಲಿ ಇರುವ ೬ ವರ್ಷದ ಗಂಡು ಹುಲಿಯನ್ನು ದತ್ತು ಪಡೆದಿದ್ದು ಈ ವರ್ಷ ಹುಲಿ ದಿನದಂದು ಅದೇ ಹುಲಿಯನ್ನು ಮತ್ತೊಂದು ವರ್ಷಕ್ಕೆ ೨ ಲಕ್ಷ ೯೫ ಸಾವಿರ ರೂಪಾಯಿ ಚೆಕ್ ನೀಡಿ ಈ ಹುಲಿ ಜೊತೆಗೆ ಇನ್ನೂ ೪ ಪ್ರಾಣಿಗಳನ್ನು ದತ್ತು ಪಡದಿದ್ದಾರೆ.
ದರ್ಶನ್ ಮೈಸೂರಿನ ಮೃಗಾಲಯದಲ್ಲಿ ೧ ಹುಲಿ, ಎರಡು ಆನೆ ಕೊಂಡ ಹಾವು ಹಾಗೂ ೧ ಆನೆಯನ್ನು ದತ್ತು ಪಡೆದಿದ್ದಾರೆ ಎಂಉ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.