ಲವ್ ಮಾಕ್ಟೇಲ್ ಖ್ಯಾತಿಯ ಸ್ಯಾಂಡಲ್ವುಡ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
- — darling krishna (@darlingkrishnaa) April 14, 2021 " class="align-text-top noRightClick twitterSection" data="
— darling krishna (@darlingkrishnaa) April 14, 2021
">— darling krishna (@darlingkrishnaa) April 14, 2021
ಗೋವಾದಲ್ಲಿ 'ಶುಗರ್ ಫ್ಯಾಕ್ಟರಿ' ಸಿನಿಮಾ ಶೂಟಿಂಗ್ನಲ್ಲಿ ಡಾರ್ಲಿಂಗ್ ಕೃಷ್ಣ ಭಾಗಿಯಾಗಿದ್ದರು. ಈ ವೇಳೆ, ಅವರ ಪತ್ನಿ ಮಿಲನಾ ನಾಗರಾಜ್ ಕೂಡ ಉಳಿದುಕೊಂಡಿದ್ದರು. ಸಿನಿಮಾ ಶೂಟಿಂಗ್ ನಿನ್ನೆ ಮುಕ್ತಾಯಗೊಂಡಿರುವ ಕಾರಣ ಸಿನಿಮಾ ತಂಡ ಕೊರೊನಾ ಪರೀಕ್ಷೆಗೊಳಪಟ್ಟಿತ್ತು. ಇದರ ಬೆನ್ನಲ್ಲೇ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಟ್ವೀಟ್ ಮಾಡಿದ ಡಾರ್ಲಿಂಗ್ ಕೃಷ್ಣ
ಎಲ್ಲರಿಗೂ ನಮಸ್ಕಾರ, ನನಗೆ ಹಾಗೂ ಮಿಲನಾ ನಾಗರಾಜ್ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ನಮ್ಮ ಜೊತೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಬ್ಬರ ಜೋರಾಗಿದ್ದು, ಈಗಾಗಲೇ ಅನೇಕ ಸೆಲೆಬ್ರಿಟಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.