ಲಾಕ್ಡೌನ್ನಿಂದ ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದ ಸಿನಿ ಕಾರ್ಮಿಕರು ಹಾಗೂ ಸಾಹಸ ಕಲಾವಿದರಿಗೆ ಫೈರ್ ಸಂಸ್ಥೆ ಮೂಲಕ ನಟ ಚೇತನ್ ದಿನಸಿ ಕಿಟ್ ನೀಡುವ ಮೂಲಕ ನೆರವಾಗಿದ್ದಾರೆ. ಸುಮಾರು 250 ಕಾರ್ಮಿಕರು ಹಾಗೂ ಸಾಹಸ ಕಲಾವಿದರಿಗೆ ಚೇತನ್ ನೆರವಾಗಿದ್ದಾರೆ.
ನಂತರ ಲಾಕ್ಡೌನ್ ವೇಳೆ ಸಾವನಪ್ಪಿದವರಿಗೆ ಹಾಗೂ ನಟ ಚಿರಂಜೀವಿ ಸರ್ಜಾಗೆ ಸಂತಾಪ ಸೂಚಕವಾಗಿ ಒಂದು ನಿಮಿಷ ಮೌನಾಚರಣೆ ಮಾಡಿ, ಅನಿರೀಕ್ಷಿತವಾಗಿ ನಿಧನರಾದ ಚಿರುಗೆ ಅಂತಿಮ ನಮನ ಸಲ್ಲಿಸಿದ್ರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ನಟ ಚೇತನ್, ಲಾಕ್ಡೌನ್ನಿಂದ ಸಿನಿ ಕಾರ್ಮಿಕರು ಕೆಲಸ ಇಲ್ಲದೆ ಕಷ್ಟದಲ್ಲಿ ಇದ್ದಾರೆ. ಯಾರೂ ಕೂಡ ಹಸಿವಿನಿಂದ ಇರಬಾರದು ಎಂಬ ನಿಟ್ಟಿನಲ್ಲಿ ಸುಮಾರು 250 ಸಿನಿ ಕಾರ್ಮಿಕರಿಗೆ ಇಂದು ಒಂದು ತಿಂಗಳಿಗೆ ಆಗುವಷ್ಟು ಅಗತ್ಯ ದಿನಸಿ ವಸ್ತುಗಳನ್ನು ನೀಡಿರುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲೂ ಕಷ್ಟದಲ್ಲಿ ಇರುವವರಿಗೆ ನೆರವು ನೀಡುತ್ತೇವೆ ಎಂದು ನಟ ಚೇತನ್ ಹೇಳಿದ್ರು. ಈ ಹಿಂದೆ ಕೂಡಾ ಚೇತನ್ ಲಾಕ್ಡೌನ್ ಸಮಯದಲ್ಲಿ ಸಿನಿ ಕಾರ್ಮಿಕರು ಹಾಗೂ ಪೋಷಕ ಕಲಾವಿದರಿಗೆ ಸುಮಾರು 7 ಲಕ್ಷ ರೂಪಾಯಿಯಷ್ಟು ನೆರವು ನೀಡಿದ್ರು.