ಪೌರತ್ವ ಕಾಯ್ದೆ ವಿರುದ್ಧ ಯಾರೆಲ್ಲ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಅವರೇ ನಿಜವಾದ ದೇಶಭಕ್ತರು ಎಂದು ನಟ ಚೇತನ್ ಹೇಳಿದ್ದಾರೆ.
ಪೌರತ್ವ ಕಾಯ್ದೆ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಚೇತನ್, CAA ಮತ್ತು NRC ಎರಡು ಕಾಯ್ದೆಯಲ್ಲೂ ಅನೇಕ ಸಮಸ್ಯೆಗಳಿವೆ. NRC ಕಾಯ್ದೆ ಬಡವರು, ಮಹಿಳೆಯರ ವಿರುದ್ಧವಾಗಿದೆ. ದೇಶದ ಪೌರತ್ವಕ್ಕೆ ಆಧಾರ್, ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್ಪೋರ್ಟ್ ಯಾವುದು ಆಗಲ್ಲ ಅಂದ್ರೆ ನಮ್ಮ ಬಳಿ ಇನ್ಯಾವ ತರಹದ ದಾಖಲೆಗಳಿವೆ. ಜನರಿಗೆ ಹಿಂಸೆ ಕೊಡುವ ಪ್ರಯತ್ನ ಇದಾಗಿದೆ ಎಂದು ಚೇತನ್ ಹೇಳಿದ್ರು.
CAAಗೆ ಪಾಕಿಸ್ತಾನ, ಬಾಂಗ್ಲದೇಶ ಹಾಗೂ ಅಫ್ಘಾನಿಸ್ಥಾನ ಈ ಮೂರು ದೇಶಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಬೇಕು. ಆದ್ರೆ ಬರ್ಮಾವನ್ನು ಕನ್ಸಿಡರ್ ಮಾಡಿಲ್ಲ. ಕೇವಲ ಮುಸ್ಲಿಂ ದೇಶಗಳು ಮಾತ್ರ ದೌರ್ಜನ್ಯ ಮಾಡುತ್ತಿವೆಯೇ? ಎಂದು ಪ್ರಶ್ನೆ ಮಾಡಿದ ಚೇತನ್, ಕೆಲವೇ ಧರ್ಮಗಳನ್ನು ಟಾರ್ಗೆಟ್ ಮಾಡೋದು ನಮ್ಮ ಭಾರತೀಯ ಸಂವಿಧಾನದ ಜಾತ್ಯತೀತತೆ ಯೋಚನೆಗೆ ವಿರುದ್ಧ ಎಂದು ಹೇಳಿದ್ರು.