ನಿನ್ನೆಯಷ್ಟೇ ನಟ ಉಪೇಂದ್ರ ತ್ರಿಭಾಷಾ ನೀತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಆ ದಿನಗಳು ಖ್ಯಾತಿಯ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ನಮ್ಮ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುವುದು ದೇಶದ್ರೋಹದ ಕೆಲಸ ಎಂದು ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ಭಾಷೆಗಳನ್ನು ಒಡೆದು ಹಿಂದಿ ಹೇರಿಕೆ ಮಾಡುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಮಗೆ ದ್ವಿಭಾಷಾ ನೀತಿ ಸಾಕು. ನಾವು ಹಿಂದಿ ಕಲಿಯಬೇಕು ಎನ್ನುವುದಾದರೆ ನಮ್ಮ ಕನ್ನಡ ಭಾಷೆ ಹಾಗೂ ತಮಿಳು, ತೆಲುಗು, ಮಲಯಾಳಂ ಭಾಷೆಗಳನ್ನು ಉತ್ತರ ಭಾರತದ ಜನರು ಏಕೆ ಕಲಿಯಲಿಲ್ಲ..? ಅವರು ನಮ್ಮ ಭಾಷೆ ಕಲಿಯುವುದಿಲ್ಲ ಎಂದ ಮಾತ್ರಕ್ಕೆ ನಾನು ಹಿಂದಿ ಭಾಷೆಯನ್ನು ಏಕೆ ಕಲಿಯಬೇಕು ಎಂದು ಚೇತನ್ ಪ್ರಶ್ನಿಸಿದ್ದಾರೆ. ನಮಗೆ ದ್ವಿಭಾಷಾ ನೀತಿ ಸಾಕು. ನಾವು ಇಷ್ಟು ವರ್ಷಗಳ ಕಾಲ ಲಿಂಕ್ ಭಾಷೆಗಳನ್ನು ಅನುಸರಿಸಿಕೊಂಡು ಬಂದಿದ್ದೇವೆ. ನಮ್ಮ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುವುದು ಬೇಡ. ಆಸಕ್ತಿ ಇದ್ದವರು ಕಲಿಯಲಿ. ಆದರೆ ಬಲವಂತವಾಗಿ ಹೇರಿಕೆ ಮಾಡುವುದು ಬೇಡ ಎಂದು ಚೇತನ್ ಮಾತನಾಡಿದ್ದಾರೆ.