ಮೊನ್ನೆ ‘ರಾಜಣ್ಣನ ಮಗ’ ಸಿನಿಮಾ ಮಾಧ್ಯಮಘೋಷ್ಠಿಗೆ ಹಿರಿಯ ನಟ ಚರಣ್ ರಾಜ್ ಆಗಮಿಸಿದ್ದರು. ಈ ಚಿತ್ರದಲ್ಲಿ ಅವರೇ ರಾಜಣ್ಣ. ಇವರ ಮಗನೇ ನಾಯಕ ಹಾಗೂ ನಿರ್ಮಾಪಕ ಹರೀಶ್.
ಅಂದು ಹೆಚ್ಚು ಗಮನ ಸೆಳೆದದ್ದು ಚರಣ್ ರಾಜ್ ತೊಟ್ಟ ಪ್ಯಾಂಟು. ಒಟ್ಟಾರೆ 16 ಕಡೆ ಹರಿದಿರುವ ಪ್ಯಾಂಟ್ ಅದು. ಇದೇನಪ್ಪ ಈ ವಯಸ್ಸಿನಲ್ಲಿ ಇಂತಹ ಫ್ಯಾಂಟು ಅಂತಾ ಪ್ರಶ್ನಿಸಿದರೆ, ಈಗ ಇದೆ ಫ್ಯಾಷನ್. ಇದು ವ್ರಂಗ್ಲರ್ ಕಂಪನಿ ಪ್ಯಾಂಟು. ಇಷ್ಟೊಂದು ಹರಿದ ಪ್ಯಾಂಟಿನ ಬೆಲೆ 20000 ರೂಪಾಯಿ. ಇದು ಬಹಳ ವರ್ಷಗಳ ಹಿಂದೆ ಖರೀದಿ ಮಾಡಿದ್ದು ಎಂದರು ಚರಣ್.
ಪ್ಯಾಂಟ್ ಬಗ್ಗೆಯೇ ಒಂದಿಷ್ಟು ಮಾತನಾಡಲು ಶುರು ಮಾಡಿದ ಅವರು, ಇದು ಫ್ಯಾಷನ್ ಯುಗ ಸಾರ್. ನಾವು ಚಿಕ್ಕವರಾಗಿದ್ದಾಗ ಒಂದು ಸಣ್ಣದಾಗಿ ಹರಿದಿದೆ ಅಂದರೆ ಅದು ಅನಿಷ್ಟ ತೊಡಬೇಡ ಎಂದು ಹಿರಿಯರು ಹೇಳುತ್ತಿದ್ದರು. ಈಗ ನೋಡಿ 16 ಕಡೆ ಹರಿದು ಹೋಗಿರೋ ಪ್ಯಾಂಟೇ ಫೇಮಸ್ ಎಂದರು ಚರಣ್ ರಾಜ್.
ಬಳಿಕ ತಮ್ಮ ‘ರಾಜಣ್ಣನ ಮಗ’ ಸಿನಿಮಾ ಬಗ್ಗೆ ಮಾತನಾಡಿದ ಅವರು, ಈ ಚಿತ್ರದಲ್ಲಿ ನಟಿಸುವಾಗ ಡಾ!! ರಾಜಕುಮಾರ್ ಅವರನ್ನು ನೆನಪಿಸಿಕೊಂಡು ಪಾತ್ರ ಮಾಡಿದೆ ಎಂದರು. ಇನ್ನು ಚಿತ್ರದ ನಾಯಕ ಹರೀಶ್ ಜಲಗೆರೆ ಅವರಿಗೆ ಥೇಟ್ ಟೈಗರ್ ಪ್ರಭಾಕರ್ ರೀತಿ ಕಂಡು ಬಂದಿದ್ದಾರೆ. ಅದೇ ಗತ್ತು, ಧೈರ್ಯ, ಸಾಹಸ ಸನ್ನಿವೇಶಗಳಲ್ಲಿ ಉತ್ಸಾಹ ಎಂದರು.
ಇನ್ನು ಇದೇ ಅಂಬಿ ನೆನೆದು ಬೇಜಾರಿನಿಂಲದೇ ಮಾತನಾಡಿದ್ರು ಚರಣ್. 3 ತಿಂಗಳ ಹಿಂದೆ ರೇಣುಕಾಂಬ ಸ್ಟುಡಿಯೋಗೆ ಬಂದಾಗ ಈ 'ರಾಜಣ್ಣ ಮಗ' ಚಿತ್ರದ ಮಾಧ್ಯಮ ಗೋಷ್ಠಿಟಿಗೆ ಹತ್ತಿರದಲ್ಲೇ ಅಂಬರೀಶ್ ಅವರು ‘ಅಂಬಿ ನಿಂಗ್ ವಯಸ್ಸಾಯಿತು’ ಸಿನಿಮಾ ಸಾಹಸ ಸನ್ನಿವೇಶದಲ್ಲಿದ್ದರು. ಅಲ್ಲಿ ಭೇಟಿ ನೀಡಿ ಅರ್ಧ ಗಂಟೆ ಅಂಬಿ ಜೊತೆ ಹರಟಿದ್ದೆ.ಇಂದು ಎಸ್.ಆರ್.ವಿ ಥಿಯೇಟರ್ನಲ್ಲಿ ಇದೇ ಸಿನಿಮಾದ ಮಾಧ್ಯಮ ಗೋಷ್ಠಿಗೆ ಬಂದಿದ್ದೇನೆ. ಆದರೆ ಅಂಬಿ ಅಣ್ಣ ನಮ್ಮೊಂದಿಗೆ ಇಲ್ಲ ಎಂಬುದು ಬಹಳ ನೋವಿನ ಸಂಗತಿ ಎಂದರು ಚರಣ್ ರಾಜ್.