ಕನ್ನಡ ಚಿತ್ರರಂಗದ ದೊಡ್ಮನೆ ಮಗ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನರಾಗಿ, ಮೂರು ತಿಂಗಳು ಕಳೆದಿವೆ. ಕಳೆದ ವರ್ಷ ಅಕ್ಟೋಬರ್ 29ರಂದು ಪುನೀತ್ ರಾಜ್ ಕುಮಾರ್ ಹೃದರ್ಯಘಾತದಿಂದ ಇಹಲೋಕ ತ್ಯಜಿಸಿದ್ದರು. ಈ ಹಿನ್ನಲೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸದಾಶಿವನಗರ ನಿವಾಸಕ್ಕೆ ಕನ್ನಡ ಚಿತ್ರರಂಗ ಅಲ್ಲದೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯ ತಾರೆಯರು, ನಿರ್ದೇಶಕರು ಬಂದು, ಪುನೀತ್ ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ.
ಇದೀಗ ಬಹುಭಾಷೆ ನಟ ಅರ್ಜುನ್ ಸರ್ಜಾ ಹಾಗೂ ಪತ್ನಿ ಆಶಾರಾಣಿ ಇಂದು ಪುನೀತ್ ನಿವಾಸಕ್ಕೆ ತೆರೆಳಿ, ಪುನೀತ್ ಪತ್ನಿ ಅಶ್ವಿನಿಗೆ ಸ್ವಾಂತನ ಹೇಳುವ ಮೂಲಕ ಅಪ್ಪು ಫೋಟೋಗೆ ನಮನ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಅರ್ಜುನ್ ಸರ್ಜಾ, ಅಪ್ಪು ಅಗಲಿ ಮೂರು ತಿಂಗಳು ಆಯ್ತು. ಅಪ್ಪು ನನಗಿಂತ ನನ್ನ ಪತ್ನಿಗೆ ತುಂಬ ಆತ್ಮಿಯರಾಗಿದ್ದರು. ನಮಗೆ ಅವರೊಂದಿಗೆ ಒಂದೊಳ್ಳೆ ಬಾಂಧವ್ಯವು ಇತ್ತು. ಅಪ್ಪು ಬಗ್ಗೆ ಎಷ್ಟೇ ಹೇಳಿದರು, ಏನೇ ಹೇಳಿದರು ಕಡಿಮೆನೇ.
ಅಂತಹ ಮಹಾನ್ ಕಲಾವಿದನ ಮಗನಾಗಿ ಹುಟ್ಟಿ ,ಚಿಕ್ಕವಯಸ್ಸಿನಲ್ಲೇ ಇಷ್ಟು ದೊಡ್ಡ ಮಟ್ಟದ ಸಾಧಾನೆ ಮಾಡಿರುವುದು ನಿಜವಾಗಲೂ ಹೆಮ್ಮೆಯ ವಿಚಾರ. ಅವರ ಕುಟುಂಬಸ್ಥರಿಗೆ ನಾವು ಏನನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಕಷ್ಟದ ಸಮಯದಲ್ಲಿ ನಾವು ಜೊತೆಯಾಗಿ ಇರ್ತಿವಿ ಎನ್ನುವುದನ್ನಷ್ಟೇ ಹೇಳಬಹುದು ಎಂದ ಅರ್ಜುನ್ ಸರ್ಜಾ, ಆ ನೋವು ಆ ಕುಟುಂಬಕ್ಕೆ ಮನೆಯವರಿಗೆ ಕಾಡುತ್ತಿರುತ್ತದೆ ಎಂದರು.